ಕ್ರೀಡೆ

ರಣಜಿ: ಸತತ ಮೂರನೇ ಪಂದ್ಯ ಗೆದ್ದ ಕರ್ನಾಟಕ

Pinterest LinkedIn Tumblr
Karnataka ranji team Captain R Vinay Kumar in bowling action against Maharastra during the Karnataka Vs Maharastra Ranji Trophy finals on 4th day play at Rajivgandhi International Cricket Stadium at Uppala, in Hyderabad on Friday. Captain Vinaykumar achived 300 wickets in the First grade (A) cricket.  Photo by Satish Badiger
 Ranji Trophy 

ವಡೋದರ: ನಾಯಕ ವಿನಯ್‌ ಕುಮಾರ್‌ ಅವರ ಜವಾಬ್ದಾರಿಯುತ ಆಲ್‌ ರೌಂಡ್‌ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ ವಿದರ್ಭ ವಿರುದ್ಧದ ತನ್ನ ನಾಲ್ಕನೇ ಲೀಗ್‌ ಪಂದ್ಯದಲ್ಲಿ 189 ರನ್‌ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಜಯದ ಸಂಭ್ರಮ ಆಚರಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 91ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಕರ್ನಾಟಕ ಮದ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಈ ಸಂದರ್ಭದಲ್ಲಿ (110/6) ಕರ್ನಾಟಕ ತಂಡವನ್ನು ಆಧರಿಸಿದ ವಿನಯ್‌ ಭರ್ಜರಿ ಅರ್ಧ ಶತಕ(56) ಗಳಿಸಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪಂದ್ಯದಲ್ಲಿ ಒಂದು ಅರ್ಧಶತಕ ಸಹಿತ 95ರನ್‌ ಗಳಿಸುವುದರೊಡನೆ, ಒಟ್ಟು 7 ವಿಕೆಟ್‌ ಗಳನ್ನು ಪಡೆದು ವಿದರ್ಭ ತಂಡದ ಪಾಲಿಗೆ ಮುಳುವಾಗಿ ಪರಿಣಮಿಸಿದ ವಿನಯ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ:
ಮೊದಲ ಇನ್ನಿಂಗ್ಸ್: 267/10
ಎರಡನೇ ಇನ್ನಿಂಗ್ಸ್‌: 209/10

ವಿದರ್ಭ:
ಮೊದಲ ಇನ್ನಿಂಗ್ಸ್: 176/10
ಎರಡನೇ ಇನ್ನಿಂಗ್ಸ್‌: 111/10

Comments are closed.