ನವದೆಹಲಿ: ಗಡಿಯಲ್ಲಿ ಭಯೋತ್ಪಾದನೆ ಕೃತ್ಯಗಳು ನಿಲ್ಲುವವರೆಗೆ ಪಾಕಿಸ್ತಾನದೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಕ್ರಿಕೆಟರ್ ಗೌತಮ್ ಗಂಭೀರ ಅವರು ಮಂಗಳವಾರ ಹೇಳಿದ್ದಾರೆ.
‘ನಾನು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವ ಬಗ್ಗೆ ಯೋಜನೆ ಮಾಡುವುದಿಲ್ಲ. ಕ್ರೀಡೆಗಿಂತ ಭಾರತೀಯರ ಜೀವ ಮುಖ್ಯ’ ಎಂದು ಗಂಭೀರ್ ವರದಿಗಾರರಿಗೆ ತಿಳಿಸಿದ್ದಾರೆ.
ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕಿಸುವ ಬಗ್ಗೆ ಮಾತನಾಡುವ ಬದಲು ನಾವು ಸ್ವತಃ ಸೇನಾ ಸಿಬ್ಬಂದಿಯ ಶೂ ಧರಿಸಬೇಕು ಎಂದು ಕ್ರಿಕೆಟಿಗ ಒತ್ತಾಯಿಸಿದರು.
ನಾವು ಮೊದಲು ಭಾರತೀಯರು ಎಂಬುದನ್ನು ಮರೆತು ಎಸಿ ರೂಂ ನಲ್ಲಿ ಕುಳಿತು ಕ್ರಿಕೆಟ್, ಬಾಲಿವುಡ್ ರಾಜಕೀಯ ಅಂತ ಮಾತನಾಡುತ್ತೇವೆ. ಆದರೆ ತಮ್ಮ ಮಕ್ಕಳು, ಸಂಬಂಧಿ, ತಂದೆ, ಸಹೋದರರನ್ನು ಕಳೆದುಕೊಂಡ ಜನ ಸ್ವತಃ ಸೇನೆಯ ಶೂ ಧರಿಸುವ ಅಗತ್ಯ ಇದೆ ಎಂದಿದ್ದಾರೆ.
ಕ್ರೀಡೆ
Comments are closed.