ಕ್ರೀಡೆ

ವಿಶ್ವದ ನಂ.1 ಬೌಲರ್‌ ಆರ್‌.ಅಶ್ವಿನ್‌

Pinterest LinkedIn Tumblr

ashwinದುಬೈ: ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿ ವಿಜಯದ ಬಳಿಕ ಭಾರತ ತಂಡದ ಆಫ್‌ಸ್ಪಿನ್ನರ್ ಆರ್‌.ಅಶ್ವಿನ್‌ ವಿಶ್ವ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇಂದೋರ್‌ನಲ್ಲಿ 140 ರನ್‌ ನೀಡಿ 13 ವಿಕೆಟ್‌ ಪಡೆಯುವ ಮೂಲಕ ತಮ್ಮ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಅಶ್ವಿನ್ ಭಾರತಕ್ಕೆ 321 ರನ್‌ಗಳ ಗೆಲುವಿನ ಕಾಣಿಕೆ ನೀಡಿದ್ದರು. ನ್ಯೂಜಿಲೆಂಡ್‌ ವಿರುದ್ಧದ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಒಟ್ಟು 27 ವಿಕೆಟ್‌ ಗಳಿಸುವ ಮೂಲಕ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

39 ಪಂದ್ಯಗಳಲ್ಲಿ 220 ವಿಕೆಟ್‌ ಪಡೆಯುವ ಮೂಲಕ ರವಿಚಂದ್ರನ್‌ ಅಶ್ವಿನ್‌ ಮತ್ತೊಂದು ದಾಖಲೆ ಮಾಡಿದ್ದಾರೆ. ಇಂದೋರ್‌ ಟೆಸ್ಟ್‌ಗೂ ಮುನ್ನ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅಶ್ವಿನ್‌, ಡೇಲ್‌ ಸ್ಟೇನ್‌ ಮತ್ತು ಜೇಮ್ಸ್‌ ಆ್ಯಂಡರ್ಸನ್‌ರನ್ನು ಹಿಂಡಿಟ್ಟು ನಂ.1 ಸ್ಥಾನ(900 ಪಾಯಿಂಟ್ಸ್‌) ಪಡೆದಿದ್ದಾರೆ. ಆಲ್‌ರೌಂಡರ್‌ ಪಟ್ಟಿಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Comments are closed.