ಕ್ರೀಡೆ

ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಸಾಕ್ಷಿ ಮಲಿಕ್ ಪಾಕ್ ಆಟಗಾರರ ಬಗ್ಗೆ ಹೇಳಿದ್ದೇನು…?

Pinterest LinkedIn Tumblr

sakshi-malik

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ಮಧ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕ್ ಕಲಾವಿದರನ್ನು ಮತ್ತು ಆಟಗಾರರನ್ನು ನಿಷೇಧಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು, ಆಟಗಾರನಿಗೆ ವಿಶ್ವದ ಯಾವುದೇ ಮೂಲೆಯಲ್ಲೂ ಸ್ಪರ್ಧಿಸುವ ಹಕ್ಕು ಇದೆ ಎಂದಿದ್ದಾರೆ.

ವಿವಿಧ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಪಾಕಿಸ್ತಾನಿ ಆಟಗಾರರಿಗೆ ಆಹ್ವಾನ ನೀಡಬೇಕು ಎಂದು ತಾವು ಹೇಳಿರುವುದಾಗಿ ಇಂದು ಬೆಳಗ್ಗೆಯಿಂದ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಆ ರೀತಿ ಯಾವುದೇ ಹೇಳಿಕೆ ನಾನು ನೀಡಿಲ್ಲ ಸಾಕ್ಷಿ ವರದಿಗಾರರಿಗೆ ತಿಳಿಸಿದ್ದಾರೆ.

ಉರಿ ಉಗ್ರ ದಾಳಿಯ ನಂತರ ಭಾರತದಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸದಂತೆ ಪಾಕಿಸ್ತಾನಿ ಆಟಗಾರರಿಗೆ ತಡೆಯಲಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಾಕ್ಷಿ, ವಿಶ್ವದ ಯಾವುದೇ ಸ್ಥಳದಲ್ಲೂ ಸ್ಪರ್ಧಿಸುವ ಹಕ್ಕು ಆಟಗಾರನಿಗೆ ಇದೆ ಎಂದು ಮಾತ್ರ ನಾನು ಹೇಳಬಲ್ಲೆ ಎಂದರು. ಆದರೆ ಪಾಕಿಸ್ತಾನಿ ಆಟಗಾರರಿಗೆ ಭಾರತದಲ್ಲಿ ಆಡಲು ಅವಕಾಶ ನೀಡಿ ಅಂತ ನಾನು ಹೇಳಲ್ಲ ಎಂದಿದ್ದಾರೆ.

Comments are closed.