ಕ್ರೀಡೆ

ಅನಿಲ್‌ ಕುಂಬ್ಳೆ ನೇತೃತ್ವದ ಕೋಹ್ಲಿ ಪಡೆ ಬಲಿಷ್ಠ: ಮುತ್ತಯ್ಯ ಮುರಳಿಧರನ್‌

Pinterest LinkedIn Tumblr
Sri Lanka's Muttiah Muralitharan smiles during a cricket practice session ahead of their ICC Cricket World Cup final match against India on Saturday in Mumbai, March 31, 2011. REUTERS/Danish Siddiqui (INDIA - Tags: SPORT CRICKET)
Muttiah Muralitharan 

ಕೋಲ್ಕತ: ಅನಿಲ್‌ ಕುಂಬ್ಳೆ ಮಾರ್ಗದರ್ಶನದಲ್ಲಿ ಕೋಹ್ಲಿ ಬಳಗ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ತೋರಲಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ(ಸ್ಪಿನ್‌ ಮಾಂತ್ರಿಕ) ಮುತ್ತಯ್ಯ ಮುರಳಿಧರನ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಟೆಸ್ಟ್‌ ಸರಣಿ ಸೆ. 22ರಿಂದ ಆರಂಭವಾಗಲ್ಲಿದೆ. ನಂತರ ಇಂಗ್ಲೆಡ್‌ ಮತ್ತು ಆಸ್ಟ್ರೇಲಿಯಾ ತಂಡಗಳೊಂದಿಗೆ ಸ್ವದೇಶದಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಭಾರತ ತಂಡ ಆಡಲ್ಲಿದ್ದು, ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠತೆಯನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ದೊರಯಲಿದೆ ಎಂದು ಮುರಳಿಧರನ್‌ ಹೇಳಿದ್ದಾರೆ.

ಶುಕ್ರವಾರ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಅಯೋಜಿಸಿದ ಕಾರ್ಯಕ್ರಮದಲ್ಲಿ ಮುರಳಿಧರನ್‌ ಮಾತನಾಡಿದ್ದಾರೆ. ಒಂದೂವರೆ ವರ್ಷದಿಂದ ಮುರಳಿಧರನ್‌ ಅವರು ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಪರ ಸ್ಪಿನ್‌ ಬೌಲಿಂಗ್‌ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂಬರುವ ರಣಜಿ ದೇಶಿ ಟೂರ್ನಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.

ರಣಜಿ ಟೂರ್ನಿ ದೇಶದ ವಿವಿಧ ಸ್ಥಳಗಳಲ್ಲಿ ನಡೆಯಲ್ಲಿದ್ದು, ತಂಡದ ಪರಿಸ್ಥಿತಿಗೆ ತಕ್ಕಂತೆ ವಿಕೆಟ್‌ ಕಬಳಿಸಬಲ್ಲ ತಂತ್ರಗಾರಿಕೆ ಅಂಶಗಳನ್ನು ಆಟಗಾರೊಂದಿಗೆ ಹಂಚಿಕೊಂಡಿದ್ದಾರೆ.

ಭಾರತ ಕ್ರಿಕೆಟ್‌ ತಂಡಕ್ಕೆ ಅನುಕೂಲವಾಗಬಲ್ಲ ಸ್ಪಿನ್ನರ್‌ಗಳನ್ನು ಬಳಸಿಕೊಂಡು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿರುವ ಕೋಹ್ಲಿ ನಾಯಕತ್ವದ ಬಗ್ಗೆ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದರು.

Comments are closed.