ಮನೋರಂಜನೆ

ಬೀಚ್ ನಲ್ಲಿ ಅಶ್ಲೀಲ ವಿಡಿಯೋ ಶೂಟಿಂಗ್: ನಟಿ ಪೂನಂ ಪಾಂಡೆ ಅರೆಸ್ಟ್

Pinterest LinkedIn Tumblr


ಪಣಜಿ: ಗೋವಾದ ಸರ್ಕಾರಿ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಶೂಟಿಂಗ್ ಮಾಡಿದ್ದಕ್ಕೆ ನಟಿ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋವಾದ ಕೆನಕೋನಾ ಟೌನ್ ನಲ್ಲಿನ ಸರ್ಕಾರಿ ಯಂತ್ರವನ್ನು ಶೂಟಿಂಗ್ ಗೆ ಬಳಸಿಕೊಂಡಿರುವ ಆರೋಪ ನಟಿ ಪೂನಂ ಪಾಂಡೆ ವಿರುದ್ಧ ಕೇಳಿಬಂದಿದೆ.

ಕೆನಕೋನಾದ ನಾಗರಿಕರು ದೂರು ದಾಖಲಿಸಿದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದು, ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.

ಪೂನಂ ಪಾಂಡೆಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಸಹ ಸ್ಥಳೀಯರು ಆಗ್ರಹಿಸಿದ್ದರು.

Comments are closed.