ಮನೋರಂಜನೆ

ತನ್ನ ಕುರಿತು ಪೇಕ್ ವೀಡಿಯೋಗೆ ಬೇಸರ ವ್ಯಕ್ತಪಡಿಸಿ ಮೇಘನಾ ಸರ್ಜಾ ಹೇಳಿದ್ದೇನು?

Pinterest LinkedIn Tumblr


ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಸಾವಿನ ದುಃಖದಲ್ಲಿರುವ ಮನೆಯವರಿಗೆ ಯೂಟ್ಯೂಬ್ ಚಾನೆಲ್ ಗಳು ಮಾಡಿರುವ ಅವಾಂತರದಿಂದ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ ಸರ್ಜಾ. ಮಗು ಹಿಡಿದು ಕಣ್ಣೀರು ಹಾಕಿ ಧ್ರುವ. ಮೇಘನಾ ಪರಿಸ್ಥಿತಿ ಏನಾಗಿದೆ..? ಎಂಬ ಟೈಟಲ್ ಗಳೊಂದಿಗೆ ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದವು. ಇವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮೇಘನಾ ಮನವಿ ಮಾಡಿಕೊಂಡಿದ್ದಾರೆ.

ಕೆಲವರು ಅಧಿಕ ವೀಕ್ಷಕರು ಮತ್ತು ಹೆಚ್ಚು ವೀಕ್ಷಣೆ ಪಡೆದುಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ನಮ್ಮ ಕುರಿತು ಯಾವುದೇ ಮಾಹಿತಿಯನ್ನು ನಾವೇ ನೇರವಾಗಿ ನೀಡುತ್ತೇವೆ. ಇಂತಹ ಸುದ್ದಿಗಳಿಗೆ ನಂಬಬೇಡಿ “ಎಂದು ಮೇಘನಾ ರಾಜ್ ಹೇಳಿದ್ದಾರೆ.

ಈ ವೀಡಿಯೋಗಳಲ್ಲಿ ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ ಸರ್ಜಾ. ಮಗು ಹಿಡಿದು ಕಣ್ಣಿರು ಹಾಕಿ ಧ್ರುವ. ಮೇಘನಾ ಪರಿಸ್ಥಿತಿ ಏನಾಗಿದೆ..? ಎಂದು ಬರೆದುಕೊಂಡು ಅಪ್ಲೋಡ್ ಮಾಡಿವೆ. ಮತ್ತೊಂದರಲ್ಲಿ ಹೆರಿಗೆಗೆ ಹೋಗುವ ಮುನ್ನ ಚಿರು ಸಮಾಧಿ ಬಳಿ ಹೋಗಿ ಮೇಘನಾ ಮಾಡಿದ್ದೇನು ಗೊತ್ತಾ..? ಎಂಬ ಪ್ರಶ್ನೆ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ.

Comments are closed.