
ಮ್ಯಾನ್ ವರ್ಸಸ್ ವೈಲ್ಡ್ ಶೋ ಮೂಲಕ ಖ್ಯಾತಿ ಪಡೆದ ಬಿಯರ್ ಗ್ರಿಲ್ಸ್, ‘ಇನ್ಟು ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್’ ಶೋ ಇನ್ನೇನು ಪ್ರಸಾರವಾಗಲಿದೆ. ಆ ಶೋದಲ್ಲಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದು ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಅದರ ಪ್ರಸಾರಕ್ಕೆ ದಿನಾಂಕ ನಿಗದಿಯಾಗಿದೆ.
ಡಿಸ್ಕವರಿ ಪ್ಲಸ್ನಲ್ಲಿ ಸೆಪ್ಟೆಂಬರ್ 11ರಂದು ಪ್ರಸಾರವಾದರೆ, ಡಿಸ್ಕವರಿಯಲ್ಲಿ ಸೆ. 14ರಂದು ಪ್ರಸಾರವಾಗಲಿದೆ. ಈ ವಿಚಾರವನ್ನು ಸ್ವತಃ ಅಕ್ಷಯ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಅದರ ಟೀಸರ್ ಸಹ ಹಂಚಿಕೊಂಡಿದ್ದಾರೆ.
ಇದೆಲ್ಲ ಒಂದೆಡೆಯಾದರೆ ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ, ‘ಇನ್ಟು ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್’ ಶೋದ ಚಿತ್ರೀಕರಣವನ್ನು ಕರ್ನಾಟಕದಲ್ಲಿ ಮಾಡಲಾಗಿದೆ. ಕರ್ನಾಟಕದ ಚಾಮರಾಜನಗರದ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಅಂದಹಾಗೆ, ಕಳೆದ ಜನವರಿಯಲ್ಲಿಯೇ ಈ ಶೋ ಚಿತ್ರೀಕರಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅದರ ಪ್ರಸಾರ ಮಾತ್ರ ವಿಳಂಬವಾಗಿತ್ತು. ಇದೀಗ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಈ ಹಿಂದೆ ಪ್ರಧಾನಿ ಮೋದಿ, ಸೂಪರ್ಸ್ಟಾರ್ ರಜನಿಕಾಂತ್ ಅವರೂ ಈ ಶೋದಲ್ಲಿ ಭಾಗವಹಿಸಿ ಕಾಡಿನೊಳಕ್ಕೆ ಪ್ರವೇಶ ಪಡೆದ್ದರು.
Comments are closed.