
ಸೂಪರ್ ಸ್ಟಾರ್, ತಲೈವ ರಜನಿಕಾಂತ್ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸದಾ ನೆರವಾಗುತ್ತಾರೆ. ಈಗಾಗಲೆ ಸಾಕಷ್ಟು ನಿರ್ಮಾಪಕರ ಕಷ್ಟಕ್ಕೆ ಆಗಿರುವ ರಜನಿಕಾಂತ್, ಈಗ ತನ್ನನ್ನು ಹೀರೋ ಮಾಡಿದ ಮೊದಲ ನಿರ್ಮಾಪಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಭೈರವಿ ಚಿತ್ರದ ಮೂಲಕ ಸೋಲೊ ಹೀರೋ ಆಗಿ ತೆರೆ ಮೇಲೆ ಮಿಂಚಿದ್ದರು. 1978ರಲ್ಲಿ ಭೈರವಿ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ನಿರ್ಮಾಪಕ ಕಲೈಗ್ನಾನಮ್ ಅವರಿಗೆ ರಜನಿಕಾಂತ್ ಬರೋಬ್ಬರಿ ಒಂದು ಕೋಟಿ ಬೆಲೆಬಾಳುವ ಮನೆಯನ್ನು ಗಿಫ್ಟಾಗಿ ನೀಡಿದ್ದಾರೆ. 3 ಬೆಡ್ ರೂಮ್ ಇರುವ ಮನೆ ಇದಾಗಿದ್ದು ಅಪಾರ್ಟ್ ಮೆಂಟ್ ನ ಗ್ರೌಂಡ್ ಫ್ಲೋರ್ ನಲ್ಲಿ ಇದೆ.
ಇಂದು ಮನೆಯ ಗೃಹಪ್ರವೇಶ ನಡೆದಿದ್ದು ರಜನಿಕಾಂತ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ನಿರ್ಮಾಪಕ ಕಲೈಗ್ನಾನಮ್ ಅವರ ಇಡೀ ಕುಟುಂಬ ಸಂಭ್ರಮದಲ್ಲಿ ಹಾಜರಿದ್ದರು. ತಲೈವ ದೀಪ ಬೆಳಗುವ ಮೂಲಕ ಹೊಸ ಮನೆಯನ್ನು ಉದ್ಘಾಟನೆ ಮಾಡಿದರು.
ರಜನಿಕಾಂತ್ ಮೊನ್ನೆಮೊನ್ನೆಯಷ್ಟೆ ದರ್ಬಾರ್ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ರಜನಿಕಾಂತ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ದರ್ಬಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ.
Comments are closed.