ಮನೋರಂಜನೆ

ಟಾಲಿವುಡ್ ಹಾಸ್ಯ ನಟ ವೇಣು ಮಾಧವ್ ನಿಧನ

Pinterest LinkedIn Tumblr


ತೆಲುಗಿನ ಖ್ಯಾತ ಹಾಸ್ಯ ನಟ ವೇಣು ಮಾಧವ್ ಅವರು 39 ವರ್ಷಕ್ಕೆ ಬದುಕಿನ ದಾರಿಯನ್ನು ಮುಗಿಸಿ ಮರೆಯಾಗಿದ್ದಾರೆ.

ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವೇಣು ಮಾಧವ್ ಅವರನ್ನು ಸಿಕಿಂದ್ರಾಬಾದ್ ನ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವೇಣು ಮಾಧವ್ ಅವರಿಗೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಕ್ಷೀಣಿಸಿದ ಕಾರಣ ಐಸಿಯುಗೆ ರವಾನಿಸಲಾಗಿತ್ತು. ಆದರೆ ಮಧ್ಯಾಹ್ನ 12.20ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.

Comments are closed.