ಮನೋರಂಜನೆ

ಇಂದು ದುಬೈ, ಮಸ್ಕತ್, ಕ್ಯಾಲಿಫೋರ್ನಿಯಾದಲ್ಲಿ ‘ಯಾನ’ ಚಿತ್ರ ತೆರೆಗೆ

Pinterest LinkedIn Tumblr

ದುಬೈ: ಕನ್ನಡನಾಡಿನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ “ಯಾನ” ಕನ್ನಡ ಸಿನೆಮಾ ಆಗಸ್ಟ್ 2 ರ ಶುಕ್ರವಾರದಂದು ದುಬೈ, ಮಸ್ಕತ್ ಮತ್ತು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ತೆರೆಕಾಣಲಿದೆ.

ದುಬೈಯ ಹಯ್ಯತ್ ರೀಜೆನ್ಸಿಯ ಗ್ಯಾಲರಿಯಾ ಸಿನಿಮಾ ಮಂದಿರದಲ್ಲಿ ಆಗಸ್ಟ್ 2 ರಂದು ಸಂಜೆ 4 ಗಂಟೆಗೆ ಚಿತ್ರ ಪ್ರದರ್ಶನ ಕಾಣಲಿದ್ದು, ಒಮಾನಿನ ಮಸ್ಕತ್ತಿನ ಸಿಬಿಡಿ ರುವಿಯ ಸ್ಟಾರ್ ಸಿನೆಮಾ ಮಂದಿರದಲ್ಲಿ ಸಂಜೆ 5.30 ಹಾಗು ರಾತ್ರಿ 8.30 ಕ್ಕೆ ಪ್ರದರ್ಶನವಾಗಲಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ SF BAY AREA cine loungeನಲ್ಲಿ ಆಗಸ್ಟ್ 2 ರಂದು ರಾತ್ರಿ 7.30ಕ್ಕೆ ಪ್ರಥಮ ಪ್ರದರ್ಶನ ಕಾಣಲಿದೆ. ಆಗಸ್ಟ್ 3 ಮತ್ತು 4 ರಂದು ಚಿತ್ರ ಪ್ರದರ್ಶನ ಮುಂದುವರಿಯಲಿದೆ.

ವಿಜಯ ಲಕ್ಷ್ಮಿ ಸಿಂಗ್ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ಯಾನ ಚಿತ್ರ ಈಗಾಗಲೇ ಕರ್ನಾಟಕದ 100 ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಜುಲೈ 12 ರಂದು ಬಿಡುಗಡೆಯಾಗಿದ್ದು, ಚಿತ್ರ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.

https://www.facebook.com/harish.sherigar.5/videos/10206350385394849/?t=0

ನಟ ಜೈಜಗದೀಶ್‌ ಹಾಗು ವಿಜಯ ಲಕ್ಷ್ಮಿ ಸಿಂಗ್ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ‘ಯಾನ’ ಮೂಲಕ ನಾಯಕಿಯರಾಗಿ ಕನ್ನಡಚಿತ್ರ ರಂಗಕ್ಕೆ ಎಂಟ್ರಿ ನೀಡಿದ್ದು, ನಾಯಕರಾಗಿ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ನಟಿಸಿದ್ದಾರೆ.

ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು, ರವಿಶಂಕರ್ ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ.

Comments are closed.