ಮನೋರಂಜನೆ

1500 ಕೋಟಿ ಬಜೆಟ್‌ನ ರಾಮಾಯಣ ಸಿನಿಮಾ

Pinterest LinkedIn Tumblr


ಮಾಲಿವುಡ್​​​ ಅಂಗಳದಲ್ಲಿ 1000 ಕೋಟಿ ಮಹಾಭಾರತ ಪ್ರಾಜೆಕ್ಟ್​ ಡ್ರಾಪ್​ ಆದ್ಮೇಲೆ, ಟಾಲಿವುಡ್​ನಲ್ಲಿ 1500 ಕೋಟಿ ರಾಮಾಯಣ ಸಿನಿಮಾ ಸುದ್ದಿ ಬಂದಿದೆ. ತ್ರಿಡಿ ತಂತ್ರಜ್ಞಾನದಲ್ಲಿ ರಾಮ- ರಾವಣರ ಮಹಾದೃಶ್ಯಕಾವ್ಯವನ್ನ ತೆರೆಗೆ ತರೋ ಸಾಹಸ ಶುರುವಾಗಿದ್ದು, ರಾಮ ಮತ್ತು ರಾವಣರ ಪಾತ್ರಗಳಿಗೆ ರಾಮ್​​​​​​ಚರಣ್​, ಜ್ಯೂ. ಎನ್​ಟಿಆರ್​​ ಹೆಸರು ಕೇಳಿಬರ್ತಿದೆ.

ಎಷ್ಟು ಬಾರಿ ಓದಿದ್ರೂ, ಎಷ್ಟು ಬಾರಿ ಕೇಳಿದ್ರು, ಮತ್ತೆ ಮತ್ತೆ ಓದಬೇಕು, ಕೇಳಬೇಕು ಅನ್ನಿಸೋ ಕಾವ್ಯ ರಾಮಾಯಣ. ರಾಮನ ಕಥೆ. ಇದೇ ಕಥೆಯನ್ನ ಹೊಸ ತಂತ್ರಜ್ಞಾನದಲ್ಲಿ ಪ್ರೇಕ್ಷಕರ ಮುಂದೆ ತರೋಕ್ಕೆ ಇದೀಗ ತಯಾರಿ ಶುರುವಾಗಿದೆ. ಇಂತಾದೊಂದು ಸಾಹಸಕ್ಕೆ ಕೈ ಹಾಕಿರೋದು ಮೆಗಾ ಪ್ರೊಡ್ಯೂಸರ್​​ ಅಲ್ಲು ಅರವಿಂದ್. ಗೀತಾ ಆರ್ಟ್ಸ್ ಬ್ಯಾನರ್​​ನಲ್ಲಿ ಹೈಬಜೆಟ್​ ಸಿನಿಮಾಗಳನ್ನ ನಿರ್ಮಿಸಿ ಸೈ ಅನ್ನಿಸಿಕೊಂಡಿರೋ ಅಲ್ಲು ಅರವಿಂದ್ ಈಗ 1500 ಕೋಟಿ ವೆಚ್ಚದಲ್ಲಿ ತ್ರಿಡಿ ತಂತ್ರಜ್ಞಾನದಲ್ಲಿ ರಾಮಾಯಣ ಸಿನಿಮಾ ಮಾಡೋಕ್ಕೆ ಹೊರಟಿದ್ದಾರೆ.

ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ. ಸೀತೆದೇವಿ ಅಪಹರಣ ಮಾಡಿದ ರಾವಣನ ಸಂಹಾರದ ಕಥೆಯೇ ರಾಮಾಯಣ. ಇದೀಗ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ರಾಮಾಯಣ ಚಿತ್ರಕ್ಕೆ ತಯಾರಿ ನಡೀತಿದ್ದು, ಅಲ್ಲು ಅರವಿಂದ್​​ ಜೊತೆಗೆ ಬಾಲಿವುಡ್​​​ ನಿರ್ಮಾಪಕರಾದ ಮಧು ಮಂತೇನ, ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ದಂಗಲ್ ಖ್ಯಾತಿಯ ನಿತೇಶ್ ತಿವಾರಿ, ಮಾಮ್ ಖ್ಯಾತಿಯ ರವಿ ಉದ್ಯಾವರ್ ರಾಮಾಯಣ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ.

ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳಿಗೆ ತೆಲುಗು ಚಿತ್ರರಂಗ ಕೇರ್​ ಆಫ್​ ಅಡ್ರೆಸ್.. ನಂದಮೂರಿ ಫ್ಯಾಮಿಲಿ ಸ್ಟಾರ್ಸ್​​ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನ ಮಾಡೋದ್ರಲ್ಲಿ ನಿಸ್ಸೀಮರು. ಮೆಗಾ ಫ್ಯಾಮಿಲಿ ಸ್ಟಾರ್ಸ್ ಇತ್ತೀಚೆಗೆ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಎರಡೂ ಫ್ಯಾಮಿಲಿ ಸ್ಟಾರ್ಸ್ ಒಟ್ಟಿಗೆ ನಟಿಸೋ ಸಾಧ್ಯತೆಯಿದೆ. ಮಗಧೀರನಾಗಿ ಅಬ್ಬರಿಸಿದ್ದ ರಾಮ್​ ಚರಣ್​​ ರಾಮನ ಪಾತ್ರಕ್ಕೆ ಸೂಟ್ ಆಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.

ಈಗಾಗಲೇ ಅಭಿಮಾನಿಗಳು ರಾಮ ಅವತಾರದಲ್ಲಿ ಚರಣ್​ ಫ್ಯಾನ್​ ಮೇಡ್​ ಪೋಸ್ಟರ್​ಗಳನ್ನ ವೈರಲ್​ ಮಾಡಿದ್ದಾರೆ.. ಸ್ವತ: ಮಾವ ನಿರ್ಮಾಪಕರಾಗಿರೋದ್ರಿಂದ ಚರಣ್​ ರಾಮನಾಗಿ ನಟಿಸೋದು ಪಕ್ಕಾ ಅನ್ನಲಾಗ್ತಿದೆ. ಆದ್ರೆ, RRR ಸಿನಿಮಾದಲ್ಲಿ ಬ್ಯುಸಿಯಾಗಿರೋ ಚೆರ್ರಿ 1500 ಕೋಟಿ ರಾಮಾಯಣ ಚಿತ್ರಕ್ಕೆ ನೋ ಅಂದಿದ್ದಾರೆ ಅನ್ನೋ ಗುಸುಗುಸು​ ಕೇಳಿಬರ್ತಿದೆ. ರಾಮಾಯಣ ಚಿತ್ರವನ್ನ ಮೂರು ಭಾಗಗಳಾಗಿ ತೆರೆಗೆ ತರ್ತಿದ್ದು, ಮೂರು ವರ್ಷಗಳ ಕಾಲ್​ಶೀಟ್​ ಬೇಕಾಗಿದೆ ಅದಕ್ಕೆ ಒಪ್ತಾರಾ ಅನ್ನೋ ಚರ್ಚೆ ಕೂಡ ನಡೀತಿದೆ.

ರಾಮಾಯಣದಲ್ಲಿ ರಾಮನಷ್ಟೆ ರಾವಣನ ಪಾತ್ರಕ್ಕೆ ಮಹತ್ವ ಇದೆ.. ಈ ಪಾತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​ ನಟಿಸಿದ್ರೆ, ಚೆಂದ ಅನ್ನೋ ಸಲಹೆ ಕೇಳಿಬರ್ತಿದೆ. ಯಮದೊಂಗ ಸಿನಿಮಾದಲ್ಲಿ ಯಮನಾಗಿ ತಾರಕ್​ ಅಬ್ಬರಿಸಿದ್ರು. ಹೆಚ್ಚು ಕಡಿಮೆ ರಾವಣನ ಪಾತ್ರಕ್ಕೂ ಅಂತದ್ದೇ ಮ್ಯಾನರಿಸಂ, ಇಂಟೆನ್ಸ್​ ಆ್ಯಕ್ಟಿಂಗ್, ಡೈಲಾಗ್​ ಡಿಕ್ಷನ್​ ಬೇಕು.. ಸೋ ರಾವಣನ ಪಾತ್ರಕ್ಕೆ ಎನ್​ಟಿಆರ್​ ಬೆಸ್ಟ್ ಚಾಯ್ಸ್​ ಅನ್ನಲಾಗ್ತಿದೆ.

ತಾರಕ್​​ ತಾತ ಎನ್​ಟಿಆರ್​ ಹಲವು ಸಿನಿಮಾಗಳಲ್ಲಿ ರಾಮನಾಗಿ, ರಾವಣನಾಗಿ ಅಬ್ಬರಿಸಿದ್ದಾರೆ. ಜೈ ಲವ ಕುಶ ಸಿನಿಮಾದ ಒಂದು ದೃಶ್ಯದಲ್ಲಿ ರಾವಣನನ್ನೇ ಕಣ್ಮುಂದೆ ತರುವಂತೆ ಅರ್ಭಟಿಸಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು, ಯಂಗ್​ ಟೈಗರ್. ಹಾಗಾಗಿ ತಾರಕ್​ ರಾವಣನ ಪಾತ್ರ ಮಾಡ್ಬೇಕು ಅನ್ನೋದು ಅಭಿಮಾನಿಗಳ ಆಸೆ.

ಚಿಕ್ಕಪ್ಪ ಬಾಲಕೃಷ್ಣ ಕೂಡ ಶ್ರೀರಾಮರಾಜ್ಯಂ ಚಿತ್ರದಲ್ಲಿ ರಾಮನ ಅವತಾರ ತಾಳಿದ್ರು. ಅಷ್ಟೆ ಯಾಕೆ ಸ್ವತ: ತಾರಕ್​ ಚಿಕ್ಕಂದಿನಲ್ಲಿ ಶ್ರೀರಾಮನ ಪಾತ್ರ ಮಾಡಿ ಸೈ ಅನ್ನಿಸಿಕೊಂಡಿದ್ರು. ಚರಣ್​ ನೋ ಅಂದ್ರೆ, ರಾಮನ ಪಾತ್ರಕ್ಕೆ ಎನ್​ಟಿಆರ್​​ ಆಯ್ಕೆ ಮಾಡ್ಬೇಕು ಅನ್ನೋದು ಅಭಿಮಾನಿಗಳ ಆಸೆ.. ತಾತನಂತೆ ರಾಮನ ಪಾತ್ರಕ್ಕೆ ಹೇಳಿಮಾಡಿಸಿದ ನಟ ಜ್ಯೂ. ಎನ್​ಟಿಆರ್​​​​ ಅನ್ನೋರು ಇದ್ದಾರೆ.

ಸೀತಾ ದೇವಿ ಪಾತ್ರಕ್ಕೆ ನಯನತಾರಾ ಆಯ್ಕೆ ಬಹುತೇಕ ಖಚಿತ ಅನ್ನಲಾಗ್ತಿದೆ. ಈಗಾಗಲೇ ಶ್ರೀ ರಾಮರಾಜ್ಯಂ ಸಿನಿಮಾದಲ್ಲಿ ಸೀತಾದೇವಿ ಪಾತ್ರದಲ್ಲಿ ನಯನತಾರ ಸೈ ಅನ್ನಿಸಿಕೊಂಡಿದ್ದಾರೆ.

1500 ಕೋಟಿ ರಾಮಾಯಣ ಚಿತ್ರಕ್ಕಾಗಿ ಹಾಲಿವುಡ್​ನಿಂದ ಥ್ರಿಡಿ ಕ್ಯಾಮೆರಾಗಳನ್ನ ತರಿಸಲಾಗ್ತಿದೆ. ಅಕ್ಟೋಬರ್​ನಿಂದ ಶೂಟಿಂಗ್​ ಶುರು ಮಾಡಿ 2021ಕ್ಕೆ ರಾಮಾಯಣ ಫಸ್ಟ್​ ಪಾರ್ಟ್​​​ ತೆರೆಗೆ ತರೋ ಪ್ಲಾನ್​ ನಡೀತಿದೆ. ಸದ್ಯ ಸ್ಟಾರ್​ಕಾಸ್ಟ್​ ಮತ್ತು ಟೆಕ್ನಿಕಲ್​ ಟೀಂ ಸೆಲೆಕ್ಷನ್​​ನಲ್ಲಿ ಚಿತ್ರತಂಡ ಬ್ಯೂಸಿಯಾಗಿದ್ದು, 1500 ಕೋಟಿ ಬಜೆಟ್​ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆ. RRR ಸಿನಿಮಾದಲ್ಲಿ ಒಟ್ಟಿಗೆ ನಟಿಸ್ತಿರೋ ತಾರಕ್​- ಚರಣ್​ ಜೋಡಿ ರಾಮ- ರಾವಣರಾಗಿ ಅಬ್ಬರಿಸಿದ್ರೆ, ಬಾಕ್ಸಾಫೀಸ್​ ಶೇಕ್​ ಆಗೋದ್ರಲ್ಲಿ ನೋ ಡೌಟ್.

Comments are closed.