ವಿಜಯಲಕ್ಷ್ಮಿ ಸಿಂಗ್ ನಿರ್ದೇಶದ ‘ಯಾನ’ ಚಿತ್ರ ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಕೇರಳದಲ್ಲಿ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ವೈಭವಿ, ವೈನಿಧಿ, ವೈಷ್ಣವಿ ನಟನೆಯ ಚಿತ್ರ ಇದು. ‘ಚಿತ್ರದ ಕತೆ ಯೂನಿವರ್ಸಲ್ ಆಗಿದೆ ಎಂಬ ಕಾರಣಕ್ಕೆ ಮಲಯಾಳಂಗೆ ಡಬ್ ಮಾಡಲು ಮುಂದೆ ಬಂದಿದ್ದರು. ಜುಲೈ 12ರೊಳಗೆ ಇದರ ಕೆಲಸ ಮುಗಿಯುತ್ತೆ ಎಂಬ ನಂಬಿಕೆ ಇರಲಿಲ್ಲ. ಡಬ್ಬಿಂಗ್ ಬೇಗ ಮುಗಿಸಿದ್ದಾರೆ. ಕನ್ನಡ ಮತ್ತು ಮಲಯಾಳಂನಲ್ಲಿ ಒಟ್ಟಿಗೆ ತೆರೆಕಾಣುತ್ತಿದೆ’ ಎಂದಿದ್ದಾರೆ ವಿಜಯಲಕ್ಷ್ಮಿ ಸಿಂಗ್.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿದ್ದು, ಸಿನಿ ಪ್ರಿಯರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.
ಕೆಜಿಎಫ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಡಾ. ಸುಭಾಂಷು ಈ ಚಿತ್ರಕ್ಕೂ ಮಲೆಯಾಳಂನಲ್ಲಿ ಸಂಭಾಷಣೆ ಬರೆದಿದ್ದಾರೆ. ‘ಸಂಸ್ಕೃತದಲ್ಲಿ ಪ್ರಯಾಣಕ್ಕೆ ಯಾನ ಅಂತ ಹೇಳೋದ್ರಿಂದ ಮಲಯಾಳಂನಲ್ಲೂ ಯಾನ ಎಂಬ ಹೆಸರಿನಲ್ಲೇ ರಿಲೀಸ್ ಆಗಲಿದೆ.
ಚಿತ್ರದಲ್ಲಿ 7 ಹಾಡುಗಳಿವೆ. ಯೋಗರಾಜ್ ಭಟ್ ಬರೆದ ಮಿರ್ಚಿ ಹಾಡು ಇಂದು ರಿಲೀಸ್ ಆಗಿದೆ. ಲಿರಿಕಲ್ ವಿಡಿಯೋ ರಿಲೀಸ್ ಆಗಿವೆ. ರಘು ದೀಕ್ಷಿತ್, ವಿಜಯ ಪ್ರಕಾಶ್, ಚಂದನ್ ಶೆಟ್ಟಿ, ಸಂತೋಷ್, ಶಶಾಂಕ್ ಶೇಷಗಿರಿ, ಸಿದ್ದಾರ್ಥ್, ಅಪೂರ್ವ ಶ್ರೀಧರ್, ಸುಪ್ರಿಯಾ ಲೋಹಿತ್, ಇಂದು ನಾಗರಾಜ್, ಪ್ರಕೃತಿ ಕಕ್ಕರ್, ಸಾಶಾ ತಿರುಪತಿ, ರಾರಯಪರ್ ಸಿರಿ ಹಾಡಿದ್ದಾರೆ.
‘ಹಾಡಿನ ಮೇಲೆ ತುಂಬಾ ವರ್ಕ್ ಮಾಡಿದ್ದೇವೆ. ಬಹಳ ಚೆನ್ನಾಗಿ ಮೂಡಿಬಂದಿದೆ. ಸಿದ್ದಾರ್ಥ್ ಭೂಮಿ ಮ್ಯಾಗೆ ಎನ್ನುವ ಹಾಡನ್ನು ತಾನೇ ಬರೆದು ಸಂಗೀತ ನೀಡಿ ಹಾಡಿದ್ದಾರೆ. ಉತ್ತರ ಭಾರತದಲ್ಲಿ ಹೆಸರು ಮಾಡಿರುವ ಪ್ರಕೃತಿ ಕಕ್ಕರ್ ಮೊದಲ ಬಾರಿಗೆ ದಕ್ಷಿಣ ಭಾರತದ ಹಾಡೊಂದನ್ನು ಹಾಡಿದ್ದಾಳೆ. ಸಾಶಾ ರೆಹಮಾನ್ ಶಿಷ್ಯೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು. ಹಾಡುಗಳು ವೈವಿಧ್ಯಮಯವಾಗಿರಬೇಕು ಎಂಬ ಕಾರಣಕ್ಕೆ ಹಲವರಿಂದ ಹಾಡಿಸಿದ್ದೇವೆ’ ಎನ್ನುತ್ತಾರೆ ಅವರು.
ಹೊಸಬರ ಜತೆ ಜನಪ್ರಿಯರು ಕೂಡಾ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಹೃದಯ ಶಿವ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಕವಿರಾಜ್, ನಿರ್ದೇಶಕ ಶಶಾಂಕ್, ಯೋಗ್‌ರಾಜ್ ಭಟ್ ಹಾಡುಗಳನ್ನು ನೀಡಿದ್ದಾರೆ. ಚಿತ್ರ ಜುಲೈ 12ರಂದು ರಿಲೀಸ್ ಆಗುತ್ತಿದೆ.
Comments are closed.