ಮನೋರಂಜನೆ

ನಟ ಸುದೀಪ್ ಮಧ್ಯರಾತ್ರಿ ಈ ರೀತಿ ಯಾರಿಗೆ ಮೆಸೇಜ್ ಮಾಡಿದ್ದು?

Pinterest LinkedIn Tumblr


ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರೊಮ್ಯಾಂಟಿಕ್ ಮ್ಯಾನ್ ರವಿಚಂದ್ರನ್ ಪಡ್ಡೆಹುಲಿ ಚಿತ್ರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಒಂದು ವೇದಿಕೆ ಮೇಲೆ ಕಾಣಿಸಿಕೊಂಡರು.

ವೇದಿಕೆ ಮೇಲೆ ರವಿಚಂದ್ರನ್ ಎದುರು ಹಾಡು ಹೇಳಲು ಕಿಚ್ಚನಿಗೆ ಕೊಂಚ ನಾಚಿಕೆಯಾಯ್ತು. ಯಾಕೆ ಗೊತ್ತಾ?

ಕಿಚ್ಚ ಯಾವ ಹಾಡು ಹೇಳಲಿ ಎಂದು ಯೋಚನೆ ಮಾಡುತ್ತಿರುವಾಗ ರವಿಚಂದ್ರನ್ ‘ಮೊನ್ನೆ ಮಧ್ಯ ರಾತ್ರಿ ಯಾವ್ದೋ ಹಾಡು ಹೇಳಿ ಕಳುಹಿಸಿದೆಯಲ್ಲಾ ಅದನ್ನು ಹಾಡು ‘ ಎಂದು ತಮಾಷೆ ಮಾಡಿದರು. ಯಾವ ಹಾಡು ಯಾವ ಮೆಸೇಜ್ ಎಂದು ಕನ್ಫ್ಯೂಸ್ ಆದ ಕಿಚ್ಚ ರವಿಚಂದ್ರನ್ ಮುಖ ನೋಡಿಕೊಂಡು ನಿಂತರು.

ಆಗ ಮತ್ತೊಮ್ಮೆ ‘ನೀನು ಯಾವ ಸುಂದರ ಗೊಂಬೆಗೆ ಕಳುಹಿಸಲು ಹೋಗಿ ನನಗೆ ಕಳುಹಿಸಿದ್ಯೋ ಅದನ್ನೇ ಹಾಡು ‘ ಎಂದು ಕಾಮಿಡಿ ಮಾಡಿದರು. ಅದಕ್ಕೆ ಸುದೀಪ್ ರವಿಚಂದ್ರನ್ ಚಿತ್ರದ ‘ಪ್ರೇಮಾ…. ಪ್ರೇಮಾ ‘ ಹಾಡು ಹೇಳಿದರು.

’ಪಡ್ಡೆಹುಲಿ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕರ್ಲಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗುತ್ತದೆ.

Comments are closed.