ಮನೋರಂಜನೆ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲು

Pinterest LinkedIn Tumblr


ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.

ಕಳೆದ ವರ್ಷ, ಸೆಪ್ಟೆಂಬರ್ 30, 2018ರಂದು ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದಕ್ಕೆ ಸೆಲೆಬ್ರಟಿಯಾಗಿ ಬರಬೇಕಿತ್ತು. ಕಂಪನಿಯೊಂದರ ಜೊತೆ ದೀಪಕ್ ಒಪ್ಪಂದ ಮಾಡಿಕೊಂಡಿದ್ದರು. ಆ ಕಂಪನಿ ಮಾಲೀಕರು ಸೋನಾಕ್ಷಿ ಜೊತೆ ಮಾತುಕತೆ ನಡೆಸಿ ಕಾರ್ಯಕ್ರಮಕ್ಕೆ ಭಾಗವಹಿಸುವ ಬಗ್ಗೆ ಸೋನಾಕ್ಷಿ ವೀಡಿಯೋ ಒಂದನ್ನು ಕೂಡ ಪೋಸ್ಟ್ ಮಾಡಿದ್ದರು. ಒಪ್ಪಂದದಂತೆ 37 ಲಕ್ಷ ರೂ. ಗಳನ್ನು ಕಂಪನಿ ಸೋನಾಕ್ಷಿ ಸಿನ್ಹಾ ಅವರ ಖಾತೆಗೆ ಹಾಕಿತ್ತು. ಆದರೆ ಸೋನಾಕ್ಷಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ.

ಈ ಸಂಬಂಧ ನವೆಂಬರ್ 24, 2018ರಲ್ಲಿ ದೀಪಕ್ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಡಿಎಸ್ಪಿ ಮೊರಾದಾಬಾದ್ ಗಜರಾಜ್ ಸಿಂಗ್, “ನಟಿ ಸೋನಾಕ್ಷಿ ಸಿನ್ಹಾ, ಅಭಿಷೇಕ್ ಸಿನ್ಹಾ, ಮಾಳ್ವಿಕಾ ಪಂಜಾಬಿ, ಧುಮಿಲ್ ಠಕ್ಕರ್ ಮತ್ತು ಈದ್ಗಾರ್ ಸೇರಿದಂತೆ ಐವರ ವಿರುದ್ಧ ಎಫ್ಐ ಆರ್ ದಾಖಲಾಗಿದೆ ಎಂದು ಎಎನ್ಐ ಗೆ ತಿಳಿಸಿದ್ದಾರೆ.

Comments are closed.