ಮನೋರಂಜನೆ

ಕೆಜಿಎಫ್ ಚಾಪ್ಟರ್‌-2ನಲ್ಲಿ ನಾಯಕಿಗೆ ದೊಡ್ಡ ಪಾತ್ರ: ನಿರ್ದೇಶಕ ಪ್ರಶಾಂತ್‌ ನೀಲ್‌

Pinterest LinkedIn Tumblr


“ಕೆಜಿಎಫ್’ ಚಿತ್ರ ನೋಡಿದವರು ಖುಷಿಪಡುವ ಜೊತೆಗೆ “ನಾಯಕಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ’ ಎಂದಿದ್ದರು. ಜೊತೆಗೆ ಚಾಪ್ಟರ್‌-2ನಲ್ಲಿ ನಾಯಕಿ ಇರುತ್ತಾರೋ, ಇಲ್ವೋ ಎಂಬ ಮಾತುಗಳೂ ಕೇಳಿಬರುತ್ತಿದ್ದವು. ಈಗ ನಿರ್ದೇಶಕ ಪ್ರಶಾಂತ್‌ ನೀಲ್‌ ಈ ಕುತೂಹಲಕ್ಕೆ ಉತ್ತರಿಸಿದ್ದಾರೆ.

“ನಾಯಕಿ ಶ್ರೀನಿಧಿ ಶೆಟ್ಟಿ ಮೊದಲ ಚಿತ್ರದಲ್ಲೇ ಚೆನ್ನಾಗಿ ನಟಿಸಿದ್ದಾರೆ. ಚಾಪ್ಟರ್‌-1ನಲ್ಲಿ ನಾವು ಅರ್ಧ ಕಥೆಯನ್ನಷ್ಟೇ ಹೇಳಿದ್ದೇವೆ. ಚಾಪ್ಟರ್‌-2ನಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿಯವರಿಗೆ ದೊಡ್ಡ ಪಾತ್ರವಿದೆ, ಪರ್‌ಫಾರ್ಮೆನ್ಸ್‌ಗೆ ಹೆಚ್ಚಿನ ಅವಕಾಶವಿದೆ’ ಎನ್ನುವ ಮೂಲಕ ಕುತೂಹಲಕ್ಕೆ ತೆರೆಎಳೆದರು.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಅನಂತ್‌ನಾಗ್‌ ಅವರು ತುಂಬಾ ವರ್ಷಗಳ ನಂತರ ಹಿಂದಿಯಲ್ಲಿ ಡಬ್‌ ಮಾಡಿದ ಬಗ್ಗೆ ಮಾತನಾಡಿದರು. ಜೊತೆಗೆ ಹಿಂದಿ ಡಬ್ಬಿಂಗ್‌ ವೇಳೆ ಅವರ ಪತ್ನಿ ಸಹಕಾರ ನೀಡಿದ ಬಗ್ಗೆಯೂ ಹೇಳಿಕೊಂಡರು.

Comments are closed.