ಮನೋರಂಜನೆ

ದೀಪ್‍ವೀರ್ ಆರತಕ್ಷತೆಯಲ್ಲಿ ಮುಜುಗರಕ್ಕೊಳಗಾದ ಐಶ್ವರ್ಯಾ ರೈ

Pinterest LinkedIn Tumblr


ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಆರತಕ್ಷತೆಗೆ ಆಗಮಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಕೊಂಚ ಮುಜುಗರಕ್ಕೊಳಕ್ಕೆ ಒಳಗಾಗಿದ್ದಾರೆ.

ದೀಪ್‍ವೀರ್ ಮುಂಬೈನಲ್ಲಿ ಸಿನಿಮಾ ರಂಗದ ಸ್ನೇಹಿತರಿಗಾಗಿ ಶನಿವಾರ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಬಚ್ಚನ್ ಅವರು ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಜೊತೆಗೂಡಿ ಆಗಮಿಸಿದ್ದರು. ಈ ವೇಳೆ ಆರತಕ್ಷತೆಯ ಮೊದಲು ಫೋಟೋಗೆ ಪೋಸ್ ಕೊಡಲು ಬಂದಾಗ ಕಾಲು ಎಡವಿ ಬೀಳುತ್ತಿದ್ದ ಐಶ್ವರ್ಯಾ ರೈ ಅವರನ್ನು ಶ್ವೇತಾ ಬಚ್ಚನ್ ಹಿಡಿದು ಬೀಳುವುದರಿಂದ ತಪ್ಪಿಸಿದ್ದಾರೆ. ಈ ಘಟನೆಯಿಂದ ಐಶ್ವರ್ಯಾ ಕೊಂಚ ಮುಜುಗರ ಪಡುವಂತಾಯಿತು.

ಈ ಮುಜುಗರದ ನಡುವೆಯೂ ಮಾವ ಅಮಿತಾಬ್ ಬಚ್ಚನ್, ಅತ್ತೆ ಜಯಾ ಬಚ್ಚನ್ ಹಾಗೂ ನಾದಿನಿ ಶ್ವೇತಾ ಬಚ್ಚನ್ ಜೊತೆಗೆ ಕ್ಯಾಮೆರಾಗಳ ಮುಂದೆ ಫೋಟೋಗೆ ಐಶ್ವರ್ಯಾ ಖುಷಿಯಾಗಿ ಪೋಸ್ ನೀಡಿದ್ದಾರೆ.

ದೀಪಿಕಾ ಮತ್ತು ರಣ್‍ವೀರ್ ನ.14 ಹಾಗೂ 15ರಂದು ಇಟಲಿಯಲ್ಲಿ ಮದುವೆಯಾಗಿದ್ದರು. ಬಳಿಕ ಮೊದಲು ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಅದೇ ತಿಂಗಳು 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಎರಡನೇ ಆರತಕ್ಷತೆಯನ್ನು ಮಾಡಿಕೊಂಡಿದ್ದರು. ಸಿನಿಮಾ ಸ್ನೇಹಿತರಿಗಾಗಿಯೇ ಮೂರನೇ ಬಾರಿಯೂ ಆರತಕ್ಷತೆಯನ್ನು ಮುಂಬೈನಲ್ಲಿಯೇ ಆಯೋಜಿಸಿದ್ದರು.

Comments are closed.