ಮನೋರಂಜನೆ

ಅರ್ಜುನ್ ಸರ್ಜಾ ವಿರುದ್ಧ ಪ್ರಬಲ ಸೆಕ್ಷನ್‌ಗಳು

Pinterest LinkedIn Tumblr


ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಶನಿವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನವೆಂಬರ್ 2015ರಲ್ಲಿ ನಡೆದ ‘ವಿಸ್ಮಯ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತನಗೆ ಲೈಂಗಿಕ ಕಿರುಕುಳ ಮತ್ತು ಅಸಹಜ ಸ್ಪರ್ಶ ಮಾಡಿರುವುದಾಗಿ ಆರೋಪಿಸಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಾನಭಂಗ), 354ಎ (ಲೈಂಗಿಕ ದೌರ್ಜನ್ಯ) ಪ್ರಕರಣಗಳ ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ಜಾಮೀನು ರಹಿತ ಆಗಿದ್ದು ಅರ್ಜುನ್ ಸರ್ಜಾರನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ.

ಇನ್ನೊಂದು ಕಡೆ, ಅರ್ಜುನ್‌ ಸರ್ಜಾ ಅವರ ಮ್ಯಾನೇಜರ್‌ ಎಂದು ಹೇಳಲಾಗಿರುವ ಪ್ರಶಾಂತ್‌ ಸಂಬರಗಿ ವಿರುದ್ಧ ನಟಿ ಶ್ರುತಿ ಹರಿಹರನ್‌ ಅವರ ಖಾಸಗಿತನಕ್ಕೆ ಧಕ್ಕೆ ತಂದು ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾರೆ. [ ಶ್ರುತಿ ಹರಿಹರನ್‌ಗೆ ಮದುವೆ ಆಗಿದೆ ಎಂಬ ಸಂಗತಿ ದೂರಿನಲ್ಲಿ ಬಹಿರಂಗ]

ನಟ ಅರ್ಜುನ್‌ ಸರ್ಜಾ ಅವರು ನನಗೆ ನೀಡಿದ ಲೈಂಗಿಕ ಕಿರುಕುಳ ಮತ್ತು ಬೆದರಿಕೆಗಳ ಬಗ್ಗೆ ನಾನು ಮಾತನಾಡಿದ್ದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯುತ್ತಿದ್ದ ಸಭೆಯಲ್ಲಿ ನಾನು ಭಾಗವಾಹಿಸಿದ್ದಾಗ ಸಂಬರಗಿ ಎನ್ನುವ ವ್ಯಕ್ತಿ ನಾನು ಹಿಂದೂ ಭಾವನೆಗಳಿಗೆ ಧಕ್ಕೆ ತರುವುದಕ್ಕಾಗಿ ಸರ್ಜಾ ವಿರುದ್ಧ ಆರೋಪ ಮಾಡಿದ್ದೀನಿ ಎಂದು ಹೇಳಿ ಒಂದು ಧರ್ಮದವರನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ.

ಜತೆಗೆ ವಿದೇಶದಿಂದ ಹಣ ತರಿಸಿಕೊಂಡು ಮಾಧ್ಯಮಗಳಿಗೆ ನೀಡಿ ಮಹಿಳಾ ದೌರ್ಜನ್ಯದ ಸುದ್ದಿಗಳನ್ನು ಮಾಡಿಸುತ್ತಿದ್ದಾಳೆ, ಅವಳ ಫೇಸ್‌ಬುಕ್‌ ಮೂರು ಕಡೆ ಉಪಯೋಗಿಸುತ್ತಿದ್ದಾಳೆ ಎಂದು ಏಕವಚನದಲ್ಲಿ ಸಾರ್ವಜನಿಕವಾಗಿ ನಿಂದಿಸುವ ಮೂಲಕ ನನ್ನ ಖಾಸಗಿತನಕ್ಕೂ ಧಕ್ಕೆ ತಂದಿದ್ದಾರೆ. ಅವಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಕೂಡ ಹಾಕಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರೂ ನಟ ಆಗಿರುವುದರಿಂದ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಕೊಲೆ ಮತ್ತು ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಮಧ್ಯರಾತ್ರಿ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರು.

Comments are closed.