ಮನೋರಂಜನೆ

ಇದೇ ಮೊದಲ ಬಾರಿಗೆ ಮೀಟೂ ಕುರಿತು ಮಾತನಾಡಿರುವ ನಟ ಶಿವರಾಜ್‌ಕುಮಾರ್‌ ಹೇಳಿದ್ದೇನು?

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‌ ವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಮೀಟೂ ಅಭಿಯಾನವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಇದೇ ಮೊದಲ ಬಾರಿಗೆ ನಟ ಶಿವರಾಜ್‌ಕುಮಾರ್‌ ಮೀಟೂ ಕುರಿತು ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ಮೀಟೂ ಬಗ್ಗೆ ಮಾತನಾಡಲು ಆಗಲ್ಲ. ಇಂಡಸ್ಟ್ರಿಗೆ ಸಂಬಂಧಿಸಿದ ವಿಚಾರಗಳೆಂದರೆ ನೋವಾಗುತ್ತದೆ. ವಾಣಿಜ್ಯ ಮಂಡಳಿಯಲ್ಲಿ ಆದಷ್ಟು ಬೇಗ ಸಮಸ್ಯೆ ಬಗೆಹರಿಯುತ್ತದೆ. ಯಾಕೆಂದರೆ ಮಂಡಳಿ ಮೇಲೆ ಒಂದು ಗೌರವವಿದ್ದು, ನಮ್ಮಲ್ಲೇ ಎಲ್ಲ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ ಮೀಟೂ ಅವರವರ ಭಾವನೆಗಳ ಮೇಲೆ ನಿರ್ಧಾರವಾಗುತ್ತವೆ. ಅದು ತಪ್ಪಾ, ಸರಿನಾ ಎಂದು ಹೇಳಲಾಗುವುದಿಲ್ಲ. ನಾನು ಯಾರನ್ನು ನೋಯಿಸಲು ಇಷ್ಟಪಡುವುದಿಲ್ಲ. ಎಲ್ಲರೂ ಒಳ್ಳೆಯವರೇ. ದೇವರಲ್ಲಿ ಪ್ರಾರ್ಥಿಸೋಣ ಆದಷ್ಟು ಬೇಗ ಇದು ಬಗೆಹರಿಯಲಿ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Comments are closed.