ಮನೋರಂಜನೆ

ನಟಿ ಸಂಜನಾ ವಿರುದ್ಧ ರವಿ ಶ್ರೀವತ್ಸ ಪತ್ರಿಕಾಗೋಷ್ಠಿ!

Pinterest LinkedIn Tumblr


ಬೆಂಗಳೂರು: 12 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಗಂಡ ಹೆಂಡತಿ ಚಿತ್ರದ ಚಿತ್ರೀಕರಣದ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬ ನಟಿ ಸಂಜನಾ ಗರ್ಲಾನಿ ಅವರ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಹಲವು ಪ್ರಶ್ನೆಗಳ ಸುರಿಮಳೆಗೈದು ತಿರುಗೇಟು ನೀಡಿದ್ದಾರೆ.

ಬುಧವಾರ ಇತರ ನಿರ್ದೇಶಕರು,ನಿರ್ಮಾಪಕರು ಮತ್ತು ಆತ್ಮೀಯರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವಿ ಶ್ರೀವತ್ಸ ಸಂಜನಾ ವಿರುದ್ಧ ಕಿಡಿ ಕಾರಿದ್ದಾರೆ. ‘ಪ್ರಚಾರಕ್ಕಾಗಿ ಇಂತಹ ಆರೋಪ ಮಾಡಿ ನಾನು 24 ವರ್ಷ ಸಂಪಾದಿಸಿದ ಹೆಸರನ್ನು ಹಾಳು ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಆಕೆಗೆ ಮೊದಲೆ ಗೊತ್ತಿತ್ತು,ಸಂಪ್ರದಾಯಸ್ಥ ಕುಟುಂಬದವಳಾದರೆ ಯಾಕೆ ನಟನೆ ಮಾಡಬೇಕಿತ್ತು’ ಎಂದು ಪ್ರಶ್ನಿಸಿದರು.

‘ರವಿ ಶ್ರೀವತ್ಸ ಮಾಗಿದ್ದಾನೆ, ಇನ್ನು ಒಂದು ವರ್ಷ ಕಳೆದರೆ ನನಗೆ 50 ವರ್ಷವಾಗುತ್ತದೆ. 2006 ರಲ್ಲಿ ಆರೋಪ ಮಾಡಿದರೆ ಕಥೆ ಬೇರೇನೆ ಇರುತ್ತಿತ್ತು’ ಎಂದರು.

ಇದೇ ವೇಳೆ ‘ಸಂಜನಾ ಅವರ ಬಳಿ ಕಾರುಗಳು,ಬಂಗ್ಲೆಗಳು ಇವೆ , ಅವುಗಳೆಲ್ಲಾ ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದರು.

‘ಆಕೆಗೆ ಸಂಸ್ಕಾರವೇ ಇಲ್ಲ’ ಎಂದ ಶ್ರೀವಾತ್ಸವ ಅವರು ‘ಮೊದಲ ಬಾರಿ ಫೋಟೋ ಶೂಟ್‌ಗೆ ಬಂದಿದ್ದ ವೇಳೆ ಆಕೆ ಗಂಡಸು ನಿಂತ ಹಾಗೆ ನಿಂತಿದ್ದಳು’ ಎಂದರು.

‘ಆಕೆಯ ವಯಸ್ಸು ಯಾವಾಗಲು ಕಡಿಮೆ ಆಗುತ್ತದೆ, ಎಲ್ಲವನ್ನೂ ಹೇಳಿಯೇ ಶೂಟಿಂಗ್‌ ಮಾಡಲಾಗಿತ್ತು. ಕಿಸ್ಸಿಂಗ್‌ ದೃಶ್ಯವನ್ನು ಮತ್ತೆ ಮತ್ತೆ ಮಾಡುವುದು ಬೇಡ ನಿನಗೆ ಮುಜುಗರ ಎಂದು ನಾನೇ ಧೈರ್ಯ ತುಂಬಿದ್ದೆ , ಆಕೆ ಒಪ್ಪಿಕೊಂಡೇ ಅಭಿನಯಿಸಿದ್ದಳು’ ಎಂದರು.

ಹಲವು ಪತ್ರಿಕೆಗಳಲ್ಲಿ ಗಂಡ ಹೆಂಡತಿ ಚಿತ್ರದ ಕುರಿತಾಗಿ, ಶ್ರೀವತ್ಸ ಅವರ ಕುರಿತಾಗಿ ಸಂಜನಾ ಅವರು ಮೆಚ್ಚುಗೆಯ ನುಡಿಗಳನ್ನಾಡಿದ ಕುರಿತು ದಾಖಲೆಗಳನ್ನೂ ಮಾಧ್ಯಮಗಳಿಗೆ ಪ್ರದರ್ಶಿಸಿದರು.

ಇದೇ ವೇಳೆ ರಾಜಸಿಂಹ ಚಿತ್ರದಲ್ಲಿ ಸಂಜನಾ ಎದೆಗಾರಿಕೆ ತೋರಿದ್ದರಲ್ಲಾ, ಆವಾಗ ಆಕೆಗೆ ಎಷ್ಟು ವಯಸ್ಸಾಗಿತ್ತು ಎಂದು ಪ್ರಶ್ನಿಸಿದರು.

ಮೊದಲು ರಕ್ಷಿತಾಗೆ ಕೇಳಿದ್ದೆ
‘ಸಂಜನಾಗಿಂತ ಮೊದಲು ಚಿತ್ರದಲ್ಲಿ ನಟಿಸಲು ರಕ್ಷಿತಾ ಅವರನ್ನು ಕೇಳಿದ್ದೆ , ಆದರೆ ಅವರು ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲ’ ಎಂದು ತಿಳಿಸಿದರು.

ಮಾಧ್ಯಮಗಳ ಮೂಲಕ ತಿರುಗೇಟು
ರವಿ ಶ್ರೀವತ್ಸ ವಿರುದ್ಧ ಆರೋಪಗಳನ್ನು ಮುಂದುವರಿಸಿರುವ ಸಂಜನಾ ಮಾಧ್ಯಮಗಳ ಮೂಲಕ ತಿರುಗೇಟು ನೀಡಿದ್ದಾರೆ.

ನಾನು 45 ಚಿತ್ರಗಳಲ್ಲಿ ನಟಿಸಿದ್ದೇನೆ. ರವಿ ಶ್ರೀವತ್ಸ ಓರ್ವ ಫ್ಲಾಪ್‌ ನಿರ್ದೇಶಕ. ನಾನೀಗ ಅಮೆರಿಕದಲ್ಲಿದ್ದು, ಬಾಹುಬಲಿ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ನಾನು ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ರವಿ ಶ್ರೀವತ್ಸ ಓರ್ವ ಸ್ಯಾಡಿಸ್ಟ್‌ ಎಂದು ಕಿಡಿ ಕಾರಿದ್ದಾರೆ.

Comments are closed.