ಮನೋರಂಜನೆ

ನಟಿ ರಾಖಿ ಸಾವಂತ್​ ವಿರುದ್ಧ 10 ಕೋಟಿ. ರೂ. ಮಾನನಷ್ಟ ಮೊಕದ್ದಮೆ ಹೂಡಿದ ತನುಶ್ರೀ ದತ್ತಾ!

Pinterest LinkedIn Tumblr

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ತನುಶ್ರೀ ದತ್ತಾ, ನಟಿ ರಾಖಿ ಸಾವಂತ್​ ವಿರುದ್ಧ 10 ಕೋಟಿ. ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಹಾರ್ನ್​ ಒಕೆ ಪ್ಲೀಸ್​ ಚಿತ್ರೀಕರಣದ ವೇಳೆ 2008ರಲ್ಲಿ ನಾನಾ ಪಾಟೇಕರ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತನುಶ್ರೀ ದತ್ತಾ ರಾಷ್ಟ್ರೀಯ ಚಾನೆಲ್​ವೊಂದರ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದರು. ಆದರೆ ಈ ಆರೋಪವನ್ನು ಅಲ್ಲಗಳೆದು ಪ್ರತಿಕ್ರಿಯಿಸಿದ್ದ ರಾಖಿ ಸಾವಂತ್, ತನುಶ್ರೀ ಹೇಳಿರುವುದು ಸುಳ್ಳು. ಆಕೆ ಸುಳ್ಳುಗಾರ್ತಿ ಎಂದಿದ್ದರು.

ಇಷ್ಟೇ ಅಲ್ಲದೆ ತನುಶ್ರೀ ದತ್ತಾ ಅವರ ವ್ಯಕ್ತಿತ್ವವನ್ನು ಹಾಳುಗೆಡಿಸುವಂಥ ಅನೇಕ ಹೇಳಿಕೆಗಳನ್ನು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದ ರಾಖಿ, ತನುಶ್ರೀ ನಿರ್ದೇಶಕನ ವಿರುದ್ಧ ಕತೆಗಳನ್ನು ಹೆಣೆಯುತ್ತಿದ್ದಾಳೆ ಎಂದಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ತನುಶ್ರೀ ತನ್ನ ವಕೀಲರಾದ ನಿತಿನ್​ ಸತ್ಪುಟೆ ಅವರ ಕಡೆಯಿಂದ ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಸಿದ್ದಾರೆ. ರಾಷ್ಟ್ರೀಯ ವಾಹಿನಿಯೊಂದಿಗೆ ದೂರಿನ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿತಿನ್​, “ರಾಖಿ ಸಾವಂತ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಅವರು 10 ಕೋಟಿ. ರೂ ಪರಿಹಾರಧನ ನೀಡಬೇಕು. ಇಲ್ಲವಾದರೆ ಎರಡು ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ಅನುಭವಿಸಬೇಕು” ಎಂದಿದ್ದಾರೆ.

ಹಾರ್ನ್​ ಒಕೆ ಪ್ಲೀಸ್​ ಚಿತ್ರದಿಂದ ತನುಶ್ರೀ ದತ್ತಾ ಹಿಂದೆ ಸರಿದ ನಂತರ ಅವರ ಜಾಗಕ್ಕೆ ರಾಖಿ ಸಾವಂತ್​ ಅವರನ್ನು ಕರೆತರಲಾಗಿತ್ತು.

Comments are closed.