ಮನೋರಂಜನೆ

ಅರ್ಜುನ್ ಸರ್ಜಾ ವಿರುದ್ಧ ಮತ್ತೊಂದು ನಟಿ ಆರೋಪ ! ಹೆಸರನ್ನು ಗೌಪ್ಯವಾಗಿಟ್ಟಿರುವ ನಟಿ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಬಹುಭಾಷಾ ನಟಿ ಶ್ರುತಿ ಹರಿಹರನ್ ಅವರು ಮೊನ್ನೆಯಷ್ಟೇ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಇದರ ಬೆನ್ನಲ್ಲೇ ಮತ್ತೊಂದು ನಟಿ ಸಹ ಅರ್ಜುನ್ ವಿರುದ್ಧ ಆರೋಪ ಮಾಡಿದ್ದಾರೆ.

ನಟಿ ತಮ್ಮ ಹೆಸರನ್ನು ಗೌಪ್ಯವಾಗಿಟ್ಟು ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸರ್ಜಾ ಅವರೊಂದಿಗೆ ನಾನು ಒಂದು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನ್ನ ನಂಬರ್ ಗೆ ಅರ್ಜುನ್ ಸರ್ಜಾ ಕಾಲ್ ಮಾಡುತ್ತಿದ್ದರು. ಅದನ್ನು ನಾನು ಅವೈಡ್ ಮಾಡುತ್ತಿದ್ದು, ಅವರ ಮಗಳಿಗಿಂತಲೂ ಚಿಕ್ಕ ವಯಸ್ಸು ನಂದು. ಅವರು ಸಿಕ್ಕಾಗಲೆಲ್ಲ ಇರಿಸು ಮುರಿಸಾಗುತ್ತಿತ್ತು. ಶ್ರುತಿ ಹರಿಹರನ್ ಮಾಡಿರುವ ಆರೋಪವನ್ನು ನಾನು ಒಪ್ಪುತ್ತೇನೆ ಎಂದು ಅನಾಮಧೇಯ ನಟಿ ಆರೋಪ ಮಾಡಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ನಾನು ನನ್ನ ಹೆಸರನ್ನು ಗೌಪ್ಯವಾಗಿಟ್ಟಿದ್ದೇನೆ. ನಾನು ಒಂದು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಜೊತೆಗೆ ಕೆಲಸ ಮಾಡಿದ್ದೇನೆ. ಸಹಾಯಕ ನಿರ್ದೇಶಕನಿಂದ ನನ್ನ ಮೊಬೈಲ್ ನಂಬರ್ ಪಡೆದ ಸರ್ಜಾ ನನ್ನನ್ನು ಸಂಪರ್ಕಿಸಿ, ಮುಂದಿನ ತಮ್ಮ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವಂತೆ ಹಾಗೂ ಆ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದ್ದರು.

ಇದಾದ ನಂತರ ಪದೇ ಪದೇ ಕಾಲ್ ಮಾಡುವುದು, ಮೆಸೇಜ್ ಮಾಡುತ್ತಿದ್ದರು. ಇದು ನನಗೆ ಇರಿಸು ಮುರಿಸು ಉಂಟು ಮಾಡುತ್ತಿತ್ತು. ನಾನು ಒಮ್ಮೆ ಅರ್ಜುನ್ ಸರ್ಜಾ ಅವರಿಗೆ ನಿಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನವಳು ನಾನು ಎಂದು ಹೇಳಿ ಅವರ ಮೆಸೇಜ್ ಮತ್ತು ಕಾಲ್ ಗಳನ್ನು ಆದಷ್ಟು ನಿಯಂತ್ರಿಸಲು ನಿರ್ಧರಿಸಿದ್ದೆ. ಏಕೆಂದರೆ ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿಯದೇ ಸುಮ್ಮನಾಗಿದ್ದೇ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Comments are closed.