ಮನೋರಂಜನೆ

ದಿ ವಿಲನ್‌ ನಲ್ಲಿ ಶಿವರಾಜ್ ಕುಮಾರ್ ಗೆ ಅವಮಾನ?

Pinterest LinkedIn Tumblr


ಬೆಂಗಳೂರು: ಗುರುವಾರ ತೆರೆಕಂಡ ಬಹುನಿರೀಕ್ಷಿತ ದಿ ವಿಲನ್‌ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆಯಲ್ಲಿ ಚಿತ್ರದಲ್ಲಿನ ದೃಶ್ಯವೊಂದರ ಕುರಿತು ನಾಯಕ ನಟ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ತಗಾದೆ ತೆಗೆದು ನಿರ್ದೇಶಕ ಪ್ರೇಮ್‌ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಚಿತ್ರದ ಫೈಟಿಂಗ್‌ ಸೀನ್‌ವೊಂದರಲ್ಲಿ ಶಿವರಾಜ್‌ ಕುಮಾರ್‌ ಅವರಿಗೆ ಸುದೀಪ್‌ ಅವರು ಕಾಲಿನಿಂದ ಒದೆಯುವ ದೃಶ್ಯವಿದ್ದು, ಈ ಬಗ್ಗೆ ಅಭಿಮಾನಿಗಳು ಗರಂ ಆಗಿದ್ದು,ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

ಪ್ರೇಮ್‌ ವಿರುದ್ದ ಚಿತ್ರಮಂದಿರಗಳ ಎದುರು ಪ್ರತಿಭಟನೆ ನಡೆಸುವುದಾಗಿ ಶಿವರಾಜ್‌ಕುಮಾರ್‌ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ಆರಂಭಿಸಿದ್ದಾರೆ.

ಅಭಿಮಾನಿಗಳ ತಗಾದೆಯ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿರುವ ನಟ ಸುದೀಪ್‌ ‘ಶಿವರಾಜ್‍ಕುಮಾರ್ ಅವರು 36 ವರ್ಷಗಳಿಂದ ಸಿನಿ ರಂಗದಲ್ಲಿದ್ದಾರೆ. ಕಥೆ ಕೇಳಿಯೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಶಿವಣ್ಣ ಏನು ದಡ್ಡರಾ.. ಎಂದು ಪ್ರಶ್ನಿಸಿದ್ದಾರೆ.

Comments are closed.