ಮನೋರಂಜನೆ

ದಿ ವಿಲನ್ ಕುರಿತ ಟ್ವೀಟ್ ವಿಮರ್ಶೆ, ಸುದೀಪ್ ಪ್ರತಿಕ್ರಿಯೆ ಏನು?

Pinterest LinkedIn Tumblr

ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ದಿ ವಿಲನ್ ಸಿನಿಮಾ ರಾಜ್ಯಾದ್ಯಂತ ಬುಧವಾರ ತಡರಾತ್ರಿಯೇ ತೆರೆಕಂಡಿದ್ದು, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಚಿತ್ರ ನೋಡಲು ಮುಗಿಬಿದ್ದಿದ್ದಾರೆ. ಇದೀಗ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ.

ಸಿನಿಮಾ ತುಂಬಾ ಉತ್ತಮವಾಗಿದೆ..ಶಿವಣ್ಣ, ಸುದೀಪ್ ಅವರ ಅಭಿನಯ ಸೂಪರ್. ತಾಯಿ ಸೆಂಟಿಮೆಂಟ್ ಇದೆ ಎಂದು ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ದೃಶ್ಯಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ನಾನು ದಿ ವಿಲನ್ ಸಿನಿಮಾವನ್ನು ಇಷ್ಟಪಡಲ್ಲ..ಅದಕ್ಕೆ ಕಾರಣ ಜೋಗಿ ಪ್ರೇಮ್. ಬರೇ ಬಿಲ್ಡಪ್, ಅತಿಯಾದ ಡೈಲಾಗ್ ಮತ್ತು ಗಿಮಿಕ್ ಗಳೇ ಸಿನಿಮಾದಲ್ಲಿ ತುಂಬಿದೆ. ನಾನೊಬ್ಬ ಕನ್ನಡಿಗನಾಗಿ ಚಿತ್ರಕ್ಕೆ ಶುಭಹಾರೈಸುತ್ತೇನೆ.ನಿಜವಾಗಿಯೂ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಗೆ ಪ್ರೇಮ್ ನಿಜವಾದ ವಿಲನ್ ಆಗಿದ್ದಾರೆ ಎಂದು ತೇಜಸ್ವಿ ಕನ್ನಡಿಗ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ದ ವಿಲನ್ ಸಿನಿಮಾದ ಮೊದಲಾರ್ಧ ಓಕೆ, ಸೆಕೆಂಡ್ ಹಾಫ್ ತುಂಬಾ ಎಳೆಯಲಾಗಿದೆ ಎಂದು ದೂರಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಹಾಕಿಕೊಂಡು ಪ್ರೇಮ್ ಅವರು ಕೆಟ್ಟ ಸಿನಿಮಾ ನಿರ್ದೇಶಿಸಿದ್ದಾರೆ ಎಂದು ಹಲವರು ಟ್ವೀಟ್ ನಲ್ಲಿ ಟೀಕಿಸಿದ್ದಾರೆ.

ಎಲ್ಲಾ ಕ್ರೆಡಿಟ್ ಪ್ರೇಮ್ ಗೆ ಸಲ್ಲಬೇಕು; ಸುದೀಪ್

ದ ವಿಲನ್ ಸಿನಿಮಾ ಈ ಮಟ್ಟಿಗೆ ಯಶಸ್ವಿಯಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಇದರ ಎಲ್ಲಾ ಶ್ರೇಯಸ್ಸು ನಿರ್ದೇಶಕ ಪ್ರೇಮ್ ಗೆ ಸಲ್ಲಬೇಕು ಎಂದು ನಾಯಕ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಅದೇ ರೀತಿ ಚಿತ್ರ ಬಿಡುಗಡೆಗೂ ಮುನ್ನ ದೊರೆತ ಅಭೂತಪೂರ್ವ ಬೆಂಬಲದಿಂದ ಖುಷಿಯಾಗಿದ್ದ ಸುದೀಪ್ ಪತ್ನಿ ಪ್ರಿಯಾ ಅವರು ಕೂಡಾ ದ ವಿಲನ್ ಚಿತ್ರಕ್ಕೆ ಟ್ವೀಟ್ ನಲ್ಲಿ ಶುಭ ಹಾರೈಸಿದ್ದಾರೆ.

Comments are closed.