ಮನೋರಂಜನೆ

​’ದಿ ವಿಲನ್’ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್​ ಸ್ಯಾಂಡಲ್ ವುಡ್ ಅನ್ನು ಕರೆದಿದ್ದು ಹೇಗೆ ಗೊತ್ತಾ?

Pinterest LinkedIn Tumblr


ಇಂದು ತೆರೆಕಂಡ ಪ್ರೇಮ್​ ನಿರ್ದೇಶನದ ಬಹು ನಿರೀಕ್ಷಿತ ಕನ್ನಡ ಸಿನಿಮಾ ‘ವಿಲನ್​’ ಬಗ್ಗೆ ಪರ- ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದರೂ ಬೆಳಗ್ಗೆಯಿಂದಲೇ ಸದ್ದು ಮಾಡುತ್ತಿರುವುದಂತೂ ನಿಜ. ಸಿನಿಮಾದಲ್ಲಿರುವ ಪಾಸಿಟಿವ್, ನೆಗೆಟಿವ್​ ವಿಷಯಗಳ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ.

ಎಲ್ಲ ಕಡೆ ಸುದೀಪ್​ ಮತ್ತು ಶಿವರಾಜ್​ಕುಮಾರ್​ ಅವರ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಈ ಸಿನಿಮಾದ ನಾಯಕಿ ಆ್ಯಮಿ ಜಾಕ್ಸನ್​ ಇನ್ನೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಸಿನಿಮಾಗೆ ಪ್ರೇಮ್​ ಲಂಡನ್​ ಬೆಡಗಿ ಆ್ಯಮಿ ಜಾಕ್ಸನ್​ ಅವರನ್ನು ಕರೆತರುತ್ತೇನೆಂದು ಪ್ರಚಾರ ಗಿಟ್ಟಿಸಿಕೊಂಡಾಗಲೇ ಕನ್ನಡಾಭಿಮಾನಿಗಳಿಂದ ವಿರೋಧ ವ್ಯಕ್ತವಾಗಿತ್ತು. ಕನ್ನಡದ ನಾಯಕಿಯರನ್ನು ಬಿಟ್ಟು ಬೇರೆ ಭಾಷಿಗರಿಗೆ ಮಣೆ ಹಾಕುತ್ತಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಆ್ಯಮಿ ಚಂದನವನಕ್ಕೆ ಕಾಲಿಟ್ಟು ಸಿನಿಮಾ ಸೆಟ್ಟೇರಿ, ತೆರೆ ಕಂಡಿದ್ದೂ ಆಯಿತು.

ಅದೆಲ್ಲ ಹಳೆಯ ವಿಷಯ. ಈಗ ಹೊಸ ವಿಷಯವೇನೆಂದರೆ, ನಾಯಕಿ ಆ್ಯಮಿ ಜಾಕ್ಸನ್​ಗೆ ತಾನು ಯಾವ ಭಾಷೆಯಲ್ಲಿ ನಟಿಸಿದ್ದೇನೆ, ಆ ಚಿತ್ರರಂಗವನ್ನು ಯಾವ ಹೆಸರಿನಲ್ಲಿ ಕರೆಯುತ್ತಾರೆ ಎಂಬ ಕಿಂಚಿತ್​ ಜ್ಞಾನವೂ ಇಲ್ಲದೆ ನಮ್ಮ ಚಿತ್ರರಂಗವನ್ನು ತಮಿಳು ಚಿತ್ರರಂಗ ಎಂದು ಕರೆದಿರುವುದು ಕನ್ನಡ ಸಿನಿಮಾಪ್ರೇಮಿಗಳಲ್ಲಿ ರೋಷ ಉಕ್ಕಲು ಕಾರಣವಾಗಿದೆ.

ಸ್ಯಾಂಡಲ್​ವುಡ್​ ಬದಲು ಕಾಲಿವುಡ್​ ಎಂದ ಆ್ಯಮಿ:

ಇಂದು ನನ್ನ ಹೊಸ ಸಿನಿಮಾ ‘ವಿಲನ್’ ತೆರೆಕಂಡಿದ್ದು, ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಾಲಿವುಡ್​ನಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ಪ್ರೇಮ್​ಜಿ ಅವರಿಗೆ ಧನ್ಯವಾದ ಎಂದು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದ ಆ್ಯಮಿ ಜಾಕ್ಸನ್​ಗೆ ಕನ್ನಡಗಿರು ಸರಿಯಾಗೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯಾವ ಚಿತ್ರರಂಗದಲ್ಲಿ ನಟಿಸುತ್ತಿದ್ದೇನೆಂದೂ ಗೊತ್ತಿಲ್ಲದೆ ಅಭಿನಯಿಸುವ ಹೀರೋಯಿನ್​ಗಳನ್ನು ಕರೆದುಕೊಂಡು ಬಂದಿದ್ದಕ್ಕೆ ಪ್ರೇಮ್​ ಅವರಿಗೆ ಬುದ್ಧಿವಾದವನ್ನೂ ಹೇಳಿದ್ದಾರೆ. ಕನ್ನಡದಲ್ಲಿ ನಿಮಗೆ ನಾಯಕಿಯರೇ ಇಲ್ಲವಾ? ಎಂದು ನಿರ್ದೇಶಕರಿಗೆ ಪ್ರಶ್ನೆ ಹಾಕಿರುವ ಕನ್ನಡಿಗರು, ನಮ್ಮ ಚಂದನವನವನ್ನು ಕಾಲಿವುಡ್​ ಎಂದು ಕರೆಯುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ ಎಂದು ಆ್ಯಮಿ ಜಾಕ್ಸನ್​ಗೆ ಟ್ವಿಟ್ಟರ್​ನಲ್ಲಿ ಪಾಠ ಹೇಳಿದ್ದಾರೆ.

ಬಗ್ಗೆ ಆ್ಯಮಿ ಜಾಕ್ಸನ್​ಗೆ ಮಾಹಿತಿ ನೀಡಿ ಎಂದು ಹೇಳಿದ್ದರು. ಇದಾಗಿ ಮೂರ್ನಾಲ್ಕು ಗಂಟೆಯಲ್ಲೇ ಹಳೆಯ ಟ್ವೀಟ್​ ಡಿಲೀಟ್​ ಮಾಡಿದ ಆ್ಯಮಿ ಜಾಕ್ಸನ್​ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಸ್ಯಾಂಡಲ್​ವುಡ್​ ಎಂದು ಬದಲಾಯಿಸಿದ್ದಾರೆ. ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ಇದೀಗ ಸ್ಯಾಂಡಲ್​ವುಡ್​ನಲ್ಲೂ ಅಭಿನಯಿಸಿದ್ದೇನೆ. ದಿ ವಿಲನ್​ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್​ ಮಾಡಿ ತೇಪೆ ಹಚ್ಚಿದ್ದಾರೆ.

Comments are closed.