ಮನೋರಂಜನೆ

ಮೊದಲ ದಿನವೇ ‘ದಿ ವಿಲನ್’ ನೋಡಲು ಬಂದ ​ ಶಿವಣ್ಣ, ಸುದೀಪ್​ ಹೇಳಿದ್ದೇನು?

Pinterest LinkedIn Tumblr

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದರ ಬಗ್ಗೆ ಶಿವಣ್ಣ ಹಾಗೂ ಸುದೀಪ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರ ಬಿಡುಗಡೆಯಾದ ಮೊದಲ ದಿನವೇ ನಗರದ ನರ್ತಕಿ ಚಿತ್ರಮಂದಿರಕ್ಕೆ ಚಿತ್ರ ವೀಕ್ಷಿಸಲು ಬಂದ ಶಿವಣ್ಣ ಹಾಗೂ ಸುದೀಪ್​ ಚಿತ್ರದ ಬಗ್ಗೆ ಮಾತನಾಡಿದರು. ಸಿನಿಮಾದ ರೆಸ್ಪಾನ್ಸ್ ಬಗ್ಗೆ ಖುಷಿಯಾಗುತ್ತಿದೆ. ನನ್ನ ಮತ್ತು ಸುದೀಪ್ ಪಾತ್ರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಇದಕ್ಕೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದಗಳು. ವಿಲನ್ ಯಶಸ್ಸಿಗೆ ನೀವೆಲ್ಲ ಕಾರಣ ಎಂದು ಶಿವಣ್ಣ ತಿಳಿಸಿದರು.

ಇಷ್ಟರ ಮಟ್ಟಿಗೆ ಜನ ಮೆಚ್ಚಿಕೊಳ್ಳುತ್ತಾರೆ ಎಂದು ಗೊತ್ತಿರಲಿಲ್ಲ. ಬೇರೆ ಬೇರೆ ಕಡೆಯಿಂದ ನನಗೆ ಕರೆಗಳು ಬರುತ್ತಿವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳುತ್ತಿದ್ದಾರೆ. ಒಬ್ಬ ಅಭಿಮಾನಿ ಸಿನಿಮಾ ಮೆಚ್ಚಿಕೊಂಡ ಅಂದರೆ ಅದು ಚಿತ್ರಕ್ಕೆ ಸಿಗುವ ಜಯವಾಗಿದೆ. ಇದರಲ್ಲಿ ಜೋಗಿ ಪ್ರೇಮ್ ಶ್ರಮ ತುಂಬಾ ಇದೆ. ಏನೇ ಕ್ರೆಡಿಟ್ ಇದ್ದರು ಅದು ಪ್ರೇಮ್​ಗೆ ಸಲ್ಲಬೇಕು. ಸಿನಿಮಾಗೆ ಹೀಗೆ ನಿಮ್ಮ ಬೆಂಬಲ ಇರಲಿ ಎಂದು ಸುದೀಪ್​ ಹೇಳಿದರು.

Comments are closed.