ಮನೋರಂಜನೆ

ಯುವ ದಸರಾಗೆ ಪಾಸ್ ಕೇಳುತ್ತಿದ್ದ ನಾನು ವೇದಿಕೆ ಮೇಲೆ ಇದ್ದೇನೆ: ನಟ ಯಶ್

Pinterest LinkedIn Tumblr


ಮೈಸೂರು: ರಾಕಿಂಗ್ ಸ್ಟಾರ್ ಯಶ್ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ಕಾಲದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯುವ ದಸರಾದ ಕಡೆಯ ದಿನದ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಶ್ ತಾನು ಹುಡುಗನಾಗಿದ್ದ ಕಾಲಕ್ಕೆ ಜಾರಿಕೊಂಡು ಹಿಂದಿನ ಕಾಲದ ಎಲ್ಲ ನೆನಪುಗಳನ್ನು ಸ್ಮರಿಸಿಕೊಂಡರು.

ಹುಡುಗನಾಗಿದ್ದಾಗ ಯುವ ದಸರಾದ ಪಾಸ್ ಬೇಕು ಎನ್ನುತ್ತಿದ್ದ ನಾನು, ಇಂದು ಅದೇ ವೇದಿಕೆ ಮೇಲೆ ನಿಂತಿದ್ದೇನೆ. ಇದಕ್ಕೆಲ್ಲಾ ನಿಮ್ಮ ಪ್ರೀತಿ ಪ್ರೋತ್ಸಾಹವೇ ಕಾರಣ ಎಂದಿದ್ದಾರೆ.

ಯಶ್ ವೇದಿಕೆ ಏರುತ್ತಿದ್ದಂತೆ, ನಾನ್ ಸ್ಟಾಪ್ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಯಿತು. ಸಿಂಪಲ್ಲಾಗಿ ಕುರ್ತಾ ಧರಿಸಿ ಬಂದಿದ್ದ ಅವರು ಎಲ್ಲರ ಗಮನ ಸೆಳೆದರು. ಯಶ್ ವೇದಿಕೆ ಬರುತ್ತಿದ್ದಂತೆ, ಅವರನ್ನು ಮಾತನಾಡಲು ಬಿಡದೆ ಯುವಜನತೆ ಸೌಂಡ್ ಹೆಚ್ಚಿಸಿ, ಕುಣಿದು ಕುಪ್ಪಳಿಸಿದರು.

ಈ ವೇಳೆ ಮಾತನಾಡಿದ ಅವರು, ನಾನು ಹುಡುಗನಾಗಿದ್ದಾಗ ಇದೇ ಯುವ ದಸರಾದ ಪಾಸ್ ಬೇಕು ಎಂದು ಕೇಳಿಕೊಳ್ಳುತ್ತಿದ್ದೆ. ಆದರೆ ಇಂದು ಇದೇ ವೇದಿಕೆಯ ಮೇಲೆ ನಿಂತಿದ್ದೇನೆ. ಇದಕ್ಕೆಲ್ಲ ನಿಮ್ಮ ಪ್ರೀತಿ, ಪ್ರೋತ್ಸಾಹವೇ ಕಾರಣ. ನನಗೆ ಮೈಸೂರಿಗೆ ಬರುವುದೆಂದರೆ ತುಂಬಾ ಖುಷಿ. ಸಾಕಷ್ಟು ಊರು, ದೇಶ ನೋಡಿದ್ದೇನೆ, ಆದರೆ ಮೈಸೂರಂತ ಊರನ್ನು ಎಲ್ಲಿಯೂ ಇಲ್ಲ. ನನಗೆ ಮೈಸೂರಿಗೆ ಬಂದ್ರೆ ನನ್ನ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ ಎಂದು ತಮ್ಮ ಸಂತೋಷ ಹಂಚಿಕೊಂಡರು.

ನನ್ನ ಹೆಂಡತಿಗೆ ಯಾವಾಗಲೂ ನಮ್ಮೂರು ದಸರಾದಲ್ಲಿ ಸಿಂಗಾರಗೊಂಡಿರುತ್ತೆ ಅಂತಾ ಹೇಳುತ್ತಿದ್ದೆ. ಅಂತ ದಸರಾದಲ್ಲಿ ಭಾಗಿಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಈ ಬಾರಿಯ ದಸರಾ ಅದ್ಧೂರಿಯಾಗಿದೆ. ಎಲ್ಲಾ ವ್ಯವಸ್ಥೆ ಸೂಪರ್. ಸಚಿವರಾದ ಸಾ.ರಾ.ಮಹೇಶ್‍ರವರು 6 ತಿಂಗಳ ಮೊದಲೇ ನನಗೆ ಬನ್ನಿ ಎಂದು ಆಹ್ವಾನ ಮಾಡಿದ್ದರು. ನಮ್ಮದೇ ಸರ್ಕಾರ ಬರುತ್ತೆ ಎಂದೂ ಹೇಳಿದ್ದರು ಎಂದು ವಿವರಿಸಿದರು.

Comments are closed.