ಮನೋರಂಜನೆ

#MeToo: ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಂಗೀತಾ ಭಟ್!

Pinterest LinkedIn Tumblr


ಬೆಂಗಳೂರು: ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ “ಮೀಟೂ” ಅಭಿಯಾನ ಸ್ಯಾಂಡಲ್ ವುಡ್ ಗೆ ಸಹ ಹಬ್ಬಿದೆ. “ಪ್ರೀತಿ ಗೀತಿ ಇತ್ಯಾದಿ”, “ಎರಡನೇ ಸಲ” ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಗೀತಾ ಭಟ್ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವವನ್ನು ವಿವರಿಸಿದ್ದು ತಾವು ಚಿತ್ರರಂಗವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಹೌದು ನಟಿ ಸಂಗೀತಾ ಭಟ್ ಸ್ಯಾಂಡಲ್ ವುಡ್ ನಲ್ಲಿ ತಮಗಾದ ಅನುಭವಗಳನ್ನು ಮೂರು ಪುಟಗಳ ವಿವರಣೆ ನೀಡಿ ಚಿತ್ರರಂಗಕ್ಕೆ ಗುಡ್ ಬೈ ಎಂದಿದ್ದಾರೆ. ತಮ್ಮ ಹದಿನೈದನೇ ವಯಸ್ಸಿನಿಂದ ಇಲ್ಲಿಯವರೆಗೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ, ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹತ್ತನೇ ತರಗತಿಯಲ್ಲಿದ್ದಾಗ ಸಂಗೀತಾ ತಂದೆ ತೀರಿ ಹೋಗಿದ್ದು ಆ ಬಳಿಕ ಹೊಟ್ಟೆಪಾಡಿಗಾಗಿ ಚಿತ್ರರಂಗದತ್ತ ಆಗಮಿಸಿದ ನಟಿ ಎದುರಿಸಿದ್ದ ಕರಾಳ ಅನುಭವಗಳು ಒಂದೆರಡಲ್ಲ. ನಿರ್ದೇಶಕ, ನಟ ಸೇರಿ ಚಿತ್ರತಂಡದ ಹಲವರು ತನಗೆ ಕಿರುಕುಳ ನಿಡಿದ್ದಾರೆ. ನಾನು ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದು ಆ ಚಿತ್ರಗಳು ತೆರೆಗೆ ಬರಲೇ ಇಲ್ಲ, ಹೀಗಾಗಿ ಆ ಚಿತ್ರಕ್ಕಾಗಿನ ನನ್ನ ಸಂಭಾವನೆ ಇನ್ನೂ ದೊರಕಿಲ್ಲ ಎಂದು ನಟಿ ವಿವರಿಸಿದ್ದಾರೆ.
ಹದಿನೈದನೇ ವರ್ಷಗಳಿಂದಲೇ ಆಡಿಷನ್ ಕೊಡಲು ಪ್ರಾರಂಭಿಸಿದ ನನ್ನನ್ನು ಅಂದಿನಿಂದ ಇಂದಿನವರೆಗೆ ಚಿತ್ರರಂಗ ಹೀನಾಯವಾಗಿ ನಡೆಸಿಕೊಂಡಿದೆ ಎನ್ನುವ ನಟಿ “ವಿಷಯವನ್ನು ಯಾರ ಬಳಿ ಹೇಳಬೇಡ” ಎಂದು ಹಲವರು ನನಗೆ ಹೇಳಿದ್ದರು ಎಂದೂ ಸೇರಿಸಿದ್ದಾರೆ.

“ನಾನು ಇದಾಗಲೇ ಚಿತ್ರರಂಗದಿಂದ ದೂರವಾಗಿದ್ದು ಯಾವುದೇ ರೀತಿಯ ಪ್ರಚಾರ ಅಥವಾ ಮತ್ತೆ ಅವಕಾಶ ದಿರಕಬಹುದೆನ್ನುವ ಕಾರಣಕ್ಕೆ ಇವನ್ನೆಲ್ಲ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ನನ್ನ ಮನಸ್ಸಿನಲ್ಲಿರುವ ಸಂಕಟವನ್ನು ಹೆಚ್ಚು ಸಮಹ ಅದುಮಿಕೊಳ್ಳಲು ನನಗೆ ಸಾಧ್ಯವಾಗದ ಕಾರಣ ಎಲ್ಲವನ್ನೂ ಇಲ್ಲಿ ಬರೆದಿದ್ದೇನೆ” ಅವರು ಹೇಳಿದ್ದಾರೆ.

Comments are closed.