ಮನೋರಂಜನೆ

ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ, ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಆರೋಪ

Pinterest LinkedIn Tumblr

ಮುಂಬೈ: ನಟಿ ಕಂಗನಾ ರಣಾವತ್ ಆರೋಪದ ಬೆನ್ನಲ್ಲೇ ಸಹ ನಟರಿಂದ ತಾವು ಅನುಭವಿಸಿದ ಲೈಂಗಿಕ ಕಿರುಕುಳ ಕುರಿತಂತೆ ಒಬ್ಬೊಬ್ಬರಾಗಿ ಬಹಿರಂಗಪಡಿಸಲು ಆರಂಭಿಸಿದ್ದಾರೆ.

ಇದೀಗ ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಕೂಡ ಇದೀಗ ಅತ್ಯಾಚಾರ ಆರೋಪವೊಂದು ಕೇಳಿಬಂದಿದೆ.

ಹಿರಿಯ ಲೇಖಕಿ ಹಾಗೂ ಚಿತ್ರ ನಿರ್ಮಾಪಕಿ 1990ರ ‘ತಾರಾ’ ಖ್ಯಾತಿಯ ಅವಂತ್ ಗರ್ಡೋ ಶೋ ಮೂಲಕ ಖ್ಯಾತಿ ಪಡೆದಿದ್ದ ವಿಂತಾ ನಂದಾ ಅವರು, 2 ದಶಕಗಳ ಕಾಲ ಅಲೋಕ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಈ ವಿಚಾರವನ್ನು ಬಹಿರಂಪಡಿಸಲು ನಾನು 19 ವರ್ಷಗಳ ಕಾಲ ಕಾಯಬೇಕಾಯಿತು ಎಂದು ವಿಂತಾ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲೋಕ್ ಅವರ ಹೆಸರನ್ನು ನೇರವಾಗಿ ಹೇಳದ ವಿಂತಾ ಅವರು 1990ರ ದಶಕದ ಖ್ಯಾತ ಸಂಸ್ಕಾರಿ ಮತ್ತು ಸುವಿಖ್ಯಾತ ಟಿವಿ ನಟನಿಂದ ನನ್ನ ಮೇಲೆ 2 ದಶಕಗಳ ಕಾಲ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಹೇಳಿದ್ದಾರೆ.

ಈ ಕುರಿತಂತೆ ಐಎಎನ್ಎಸ್’ಗೆ ಸಂದೇಶದ ಮೂಲಕ ದೃಢಪಡಿಸಿರುವ ನಂದಾ ಅವರು, ಹೌದು ಅದು ಅಲೋಕ್ ನಾಥ್ ಅವರೇ, ಸಂಸ್ಕಾರಿ ನಟನೆಂದು ಹೇಳಿದರಷ್ಟೇ ಸಾಕೆಂದು ನಾನು ತಿಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ.

Comments are closed.