ಮನೋರಂಜನೆ

ಹಾಟ್ ಆಗಿ, ಲವ್ ಸ್ಟೋರಿಗಳ ನಂತರ ನಟಿ ಹರಿಪ್ರಿಯರ ವಿಭಿನ್ನ ಪಾತ್ರ!

Pinterest LinkedIn Tumblr


ಇತ್ತೀಚಿನ ತಲೆಮಾರಿನ ನಟಿಯರಲ್ಲಿ ಸದಾ ಪ್ರಯೋಗಾತ್ಮಕವಾದ ಪಾತ್ರಗಳಿಗೆ ಒಗ್ಗಿಕೊಳ್ಳೋದರಲ್ಲಿ ಮುಂಚೂಣಿಯಲ್ಲಿಯಲ್ಲಿರುವವರು ಹರಿಪ್ರಿಯಾ. ಕಮರ್ಶಿಯಲ್ ಜಾಡಿನ ಚಿತ್ರಗಳಲ್ಲೂ ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದ ಹರಿಪ್ರಿಯಾರ ಕೈಲಿರೋ ಮುಂದಿನ ಚಿತ್ರಗಳೆಲ್ಲವೂ ಹೊಸ ಬಗೆಯವೇ.

ಹರಿಪ್ರಿಯಾರನ್ನು ಹಾಟ್ ಆಗಿ, ಲವ್ ಸ್ಟೋರಿಗಳಲ್ಲಿ ನೋಡಿ ಮೆಚ್ಚಿಕೊಂಡಿದ್ದ ಅಭಿಮಾನಿಗಳು ಇನ್ನೊಂದಷ್ಟು ಕಾಲ ಅವರನ್ನು ಬೇರೆಯದ್ದೇ ರೀತಿಯಲ್ಲಿ ನೋಡಬೇಕಾಗಿ ಬಂದಿದೆ. ಇದೀಗ ಬಿಡುಗಡೆಯಾಗಿರೋ ಡಾಟರ್ ಆಫ್ ಪಾರ್ವತಮ್ಮ ಟೀಸರ್‍ನಲ್ಲಿ ಹರಿಪ್ರಿಯಾ ಅವತಾರವಂತೂ ಪಕ್ಕಾ ಭಿನ್ನ. ಈ ಚಿತ್ರದಲ್ಲವರು ಪತ್ತೇದಾರಿಯಾಗಿ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ.

ಕನ್ನಡ್ ಗೊತ್ತಿಲ್ಲ ಚಿತ್ರದಲ್ಲಿಯೂ ಅವರದ್ದು ಬೇರೆಯದ್ದೇ ಥರದ ಪಾತ್ರ. ಪಿ ವಾಸು ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿಯೂ ಅವರ ಪಾತ್ರ ಹೊಸಾ ಸಾಧ್ಯತೆಗಳದ್ದೇ. ಹೀಗೆ ಹೊಸಾ ಜಾಡಿನಲ್ಲಿಯೇ ಅವರು ಇಪ್ಪತೈದನೇ ಚಿತ್ರದತ್ತ ನಡೆದು ಬಂದಿದ್ದಾರೆ. ಅಭಿಮಾನಿಗಳು ಅವರನ್ನು ಹಳೇ ಗೆಟಪ್ಪಿನಲ್ಲಿ ನೋಡಲು ಇಷ್ಟಪಟ್ಟರೂ ಅವರ ಪ್ರಯೋಗಾತ್ಮಕ ಗುಣವನ್ನೂ ಮೆಚ್ಚಿಕೊಂಡಿದ್ದಾರೆ. ಹರಿಪ್ರಿಯಾ ಕೂಡಾ ಮುಂದಿನ ಒಂದಷ್ಟು ಚಿತ್ರಗಳಲ್ಲಿಯೂ ಬೇರೆ ಬೇರೆ ಥರದ ಪಾತ್ರಗಳನ್ನೇ ಆರಿಸಿಕೊಳ್ಳೋ ಲಕ್ಷಣಗಳಿವೆ.

Comments are closed.