ಮನೋರಂಜನೆ

ಹಾಡುಗಳಿಂದ ಪ್ರೇಕಕರನ್ನು ಆವರಿಸಿಕೊಂಡಿರುವ ತಾಯಿಗೆ ತಕ್ಕ ಮಗ

Pinterest LinkedIn Tumblr


ಅಜೇಯ್ ರಾವ್ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ಶಶಾಂಕ್ ನಿರ್ದೇಶನದ ಚಿತ್ರ ತಾಯಿಗೆ ತಕ್ಕ ಮಗ. ಟ್ರೈಲರ್, ಪೋಸ್ಟರ್ ಗಳ ಮೂಲಕವೇ ಭಾರೀ ಸದ್ದು ಮಾಡಿದ್ದ ಈ ಚಿತ್ರ ಇತ್ತೀಚೆಗೆ ಪ್ರೇಕ್ಷಕರನ್ನು ಆವರಿಸಿಕೊಂಡಿರೋದು ಹಾಡುಗಳಿಂದಾಗಿ. ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಹಾಡುಗಳ ಮೆಲೋಡಿಯಿನ್ನೂ ರಿಂಗಣಿಸುತ್ತಿರುವಾಗಲೇ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಲಾಗಿದೆ.

ಇದು ಅಮ್ಮ ಮಗನ ಬಾಂಧವ್ಯವನ್ನು ಸಾರುವ, ಮಗನೊಬ್ಬ ಅಮ್ಮನನ್ನು ಆರಾಧಿಸುವಂಥಾ ಹಾಡು. ಅಮ್ಮನೆಡೆಗಿನ ಸೆಂಟಿಮೆಂಟಿನ ಅಮ್ಮ ನಿನ್ನ ಮಗನೆಂಬ ಹೆಮ್ಮೆ ಎಂಬ ಹಾಡೀಗ ಅನಾವರಣಗೊಂಡಿದೆ. ಈ ಹಾಡು ಅಮ್ಮನ ಬಗ್ಗೆ ಬಂದಿರೋ ಎವರ್ ಗ್ರೀನ್ ಹಾಡುಗಳ ಸಾಲಿನಲ್ಲಿ ಸ್ಥಾನ ಪಡೆದು ಎಲ್ಲರನ್ನೂ ಆವರಿಸಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ.

ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ ಎಂಬ ಹಾಡು ಬಿಡುಗಡೆಯಾಗಿ ಯುವ ಮನಸುಗಳನ್ನು ಹುಚ್ಚೆಬ್ಬಿಸಿತ್ತು. ಇದೀಗ ಈ ಅಮ್ಮನ ಹಾಡು ರಿಲೀಸಾಗಿದೆ. ಇದು ತಾಯಿಗೆ ತಕ್ಕ ಮಗ ಚಿತ್ರದ ಮೂರನೇ ಹಾಡು. ಇದು ಎಲ್ಲರ ಮೂಡು ಅಮ್ಮನ ಪ್ರೀತಿಯ ಮೂಡಿನ ಮಡಿಲಿಗೆ ಜಾರಿಸುವಂತಿದೆ.

Comments are closed.