ಮನೋರಂಜನೆ

ಕಿಡಿಗೇಡಿಗಳಿಂದ ಖ್ಯಾತ ನಿರ್ದೇಶಕ ಮಣಿರತ್ನಂಗೆ ಬೆದರಿಕೆ ಕರೆ : ಮನೆ ಹಾಗೂ ಕಚೇರಿಗೆ ಪೊಲೀಸ್ ಭದ್ರತೆ

Pinterest LinkedIn Tumblr

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ನಿವಾಸಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಈ ಸಂಬಂಧ ನಿರ್ದೇಶಕ ಮಣಿರತ್ನಂ ದೂರು ದಾಖಲಿಸಿದ್ದಾರೆ. ಬಾಂಬ್​ಸ್ಕ್ವಾಡ್​​​ಮನೆಯನ್ನು ಪರಿಶೀಲನೆ ಮಾಡಿದ್ದು, ಅವರ ಮನೆ ಹಾಗೂ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಮಣಿರತ್ನಂ ಅವರ ಇತ್ತೀಚಿನ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಯೇ ಈ ಬಾಂಬ್ ಬೆದರಿಕೆಗೆ ಕಾರಣ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿನ ಕೆಲವು ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆದು ಹಾಕಬೇಕೆಂದು ಬೆದರಿಕೆ ಹಾಕಲಾಗಿದೆ.

ಸೆಪ್ಟಂಬರ್ 28 ರಂದು ಬಿಡುಗಡೆಯಾದ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿ ನಟರಾದ ಅರವಿಂದ ಸ್ವಾಮಿ, ಸಿಂಬು ವಿಜಯ್ ಸೇತುಪತಿ, ಅರುಣ್ ವಿಜಯ್, ಜ್ಯೋತಿಕಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

Comments are closed.