ಮನೋರಂಜನೆ

ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಬೆಸ್ಟ್ ಹಿರೋಯಿನ್‌: ಅಕ್ಕಿನೇನಿ ನಾಗಾರ್ಜುನ

Pinterest LinkedIn Tumblr


ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ನಂತರ ದೇವದಾಸು ಚಿತ್ರದ ನಟನೆಗೂ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಖ್ಯವಾಗಿ ಚಿತ್ರದ ಹೀರೋಗಳಾದ ಅಕ್ಕಿನೇನಿ ನಾಗಾರ್ಜುನ ಹಾಗೂ ನಾನಿ ಅವರಿಬ್ಬರೂ ರಶ್ಮಿಕಾ ಅಭಿನಯಕ್ಕೆ ಮಾರು ಹೋಗಿದ್ದಾರೆ.

ಈ ಬಗ್ಗೆ ಹೈದರಾಬಾದ್‌ನಲ್ಲಿ ಮಾತನಾಡಿದ ನಾಗ್‌, ರಶ್ಮಿಕಾ ನಿಜಕ್ಕೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರು ಟಾಲಿವುಡ್‌ನಲ್ಲಿ ಅತ್ಯುತ್ತಮ ಹಿರೋಯಿನ್‌ ಆಗುತ್ತಾರೆಂದು ಹೇಳಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರಂತಹ ಟಾಪ್ ಹೀರೋಗಳೇ ಹೊಗಳಿದ್ದಾರೆ ಎಂದರೆ ರಶ್ಮಿಕಾಗೆ ಟಾಲಿವುಡ್‌ನಲ್ಲಿ ಬಂಪರ್ ಅವಕಾಶಗಳನ್ನು ನಿರೀಕ್ಷಿಸಬಹುದು.

ಈ ಹಿಂದೊಮ್ಮೆ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ತೊರೆಯುತ್ತಾರೆ, ಇನ್ನು ಅವರು ಟಾಲಿವುಡ್‌ನಲ್ಲೇ ನೆಲೆ ನಿಲ್ಲಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹರಿದಾಡಿದ್ದವು. ಇದಕ್ಕೆ ಸಂಬಂಧಿಸಿದಂತೆ ರಶ್ಮಿಕಾರನ್ನು ಟ್ರೋಲ್ ಸಹ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಫೇಸ್‍ಬುಕ್‌ನಲ್ಲಿ ತನ್ನ ವಿರುದ್ಧದ ಆಪಾದನೆಗಳನ್ನೆಲ್ಲಾ ತಳ್ಳಿಹಾಕಿದ್ದರು. ತಾನು ಸ್ಯಾಂಡಲ್‍ವುಡ್ ಬಿಡಲ್ಲ. ಇಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಪಪಡಿಸಿದ್ದರು.

Comments are closed.