ಮನೋರಂಜನೆ

ರಿಷಬ್ ಶೆಟ್ಟಿ ಚಿತ್ರದಲ್ಲಿ ಹಾಡುವ ಮೂಲಕ ಅದೃಷ್ಟ ಪಡೆದುಕೊಂಡ ಸರಿಗಮಪ ರನ್ನರ್ ಅಪ್ ಜ್ಞಾನೇಶ್‌

Pinterest LinkedIn Tumblr

ಸರಿಗಮಪ 14 ಸೀಸನ್ ನ ರನ್ನಪ್ ಅಪ್ ಗಣಿನಾಡು ಬಳ್ಳಾರಿಯ ಪ್ರತಿಭೆ ಜ್ಞಾನೇಶ್‌ಗೆ ಅದೃಷ್ಟ ಬಲಿದಿದ್ದು ಕನ್ನಡ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ.

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸಿದ್ದ ರಿಷಬ್ ಶೆಟ್ಟಿ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ದೇಶಿಸುತ್ತಿದ್ದು ಈ ಚಿತ್ರದ ಹಾಡೊಂದಕ್ಕೆ ಜ್ಞಾನೇಶ್‌ ಧ್ವನಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಈ ಸಾಂಗ್ ರೆಕಾರ್ಡ್ ಮಾಡಲಾಯಿತು. ಇನ್ನು ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದು ಖುಷಿ ತಂದಿದೆ. ಆರಂಭದಲ್ಲಿ ಭಯವಾಗಿತ್ತು ನಂತರ ಚೆನ್ನಾಗಿ ಹಾಡಿದೆ ಎಂದು ಜ್ಞಾನೇಶ್‌ ಹೇಳಿಕೊಂಡಿದ್ದಾನೆ.

Comments are closed.