ಮನೋರಂಜನೆ

ಚಿತ್ರೀಕರಣದ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತ: ಖ್ಯಾತ ನಟಿ ಸಾವು

Pinterest LinkedIn Tumblr

ಮುಂಬೈ: ಚಿತ್ರೀಕರಣದ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ಭೋಜ್ ಪುರಿ ನಟಿ ಮೃತಪಟ್ಟಿದ್ದಾರೆ.

45 ವರ್ಷದ ನಟಿ ಮನೀಶಾ ರೈ ತನ್ನ ಸಹವರ್ತಿ ಸಂಜೀವ್ ಮಿಶ್ರಾ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದ್ದು ಈ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದು ಸಂಜೀವ್ ಮಿಶ್ರಾ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗಂಗೂಲಿ ಅವರು ತಿಳಿಸಿದ್ದಾರೆ.

ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಈ ಅಪಘಾತದಲ್ಲಿ ಸಂಭವಿಸಿದೆ. ನಟಿ ಚಿತ್ರೀಕರಣದಲ್ಲಿ ಭಾಗಿಯಾಗುವ ಸಲುವಾಗಿ ತೆರಳುತ್ತಿದ್ದರು.

Comments are closed.