ಮನೋರಂಜನೆ

ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿದ್ದ ಅನುಷ್ಕಾ ಶೆಟ್ಟಿಯನ್ನು ಕಂಡು ಅಭಿಮಾನಿಗಳು ಗರಂ ಆಗಿದ್ದು ಯಾಕೆ ಗೊತ್ತಾ?

Pinterest LinkedIn Tumblr

ಡೆಹ್ರಾಡೂನ್: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಉತ್ತರಾಖಂಡದ ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿ ಶಿವನ ದರ್ಶನವನ್ನು ಪಡೆದಿದ್ದಾರೆ.

ಅನುಷ್ಕಾ ಶೆಟ್ಟಿ ತಾವು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು 17 ಕಿ.ಮೀ ದೂರ ಕಾಲ್ನಡಿಗೆಯಲ್ಲಿಯೇ ದೇವಸ್ಥಾನಕ್ಕೆ ತೆರಳಿ ಪರಮೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಮಾಡಿದರು.

ಅನುಷ್ಕಾ ಪೂಜೆ ಮುಗಿಸಿ ಹಿಂದಿರುಗುವಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಲಿಗೆ ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್ ಕೊಟ್ಟ ಅನುಷ್ಕಾ ನಂತರ ಫೋಟೋ ತೆಗೆಸಿಕೊಳ್ಳುವುದಕ್ಕೆ ನಿರಾಕರಿಸಿ ಹೊರಟು ಹೋಗಿದ್ದಾರೆ. ಇದರಿಂದ ಅಭಿಮಾನಿಗಳು ಅನುಷ್ಕಾ ಮೇಲೆ ಗರಂ ಆಗಿದ್ದಾರೆ.

ಕೇದಾರನಾಥ ಸನ್ನಿಧಿಯಲ್ಲಿ ಭದ್ರತೆ ಸಮಸ್ಯೆ ಇದ್ದುದ್ದರಿಂದ ಅನುಷ್ಕಾ ಸೆಲ್ಫಿಗೆ ನಿರಾಕರಿಸಿದ್ದಾರೆ. ನಂತರ ಅವರು ಅಲ್ಲಿಂದ ಅರ್ಧ ದಾರಿಯವರೆಗೆ ನಡೆದುಕೊಂಡು ಹೋಗಿದ್ದಾರೆ. ಇನ್ನು ಅರ್ಧ ದಾರಿಯಲ್ಲಿ ಕುದುರೆಯನ್ನೇರಿ ಹೋಗಿದ್ದಾರೆ.

Comments are closed.