ಮನೋರಂಜನೆ

ಅಪ್ರಾಪ್ತೆಗೆ ಚುಂಬನ ಪ್ರಕರಣ: ಫೇಮಸ್‌ ಸಿಂಗರ್‌ ಹೇಳಿದ್ರು ಇದೆಲ್ಲ ಕ್ಯಾಮರಾದ ದೋಷ

Pinterest LinkedIn Tumblr


ಮುಂಬೈ: ದೋಷಯುಕ್ತ ಕ್ಯಾಮರಾ ಆ್ಯಂಗಲ್‌ನಿಂದ ಆದ ದೋಷಕ್ಕೆ ಮತ್ತು ನನ್ನದಲ್ಲದ ತಪ್ಪಿಗೆ ನಾನು ಅಪರಾಧಿ ಭಾವವನ್ನು ಅನುಭವಿಸುವಂತಾಗಿದೆ ಎಂದು ಪ್ರಸಿದ್ಧ ಅಸ್ಸಾಂ ಗಾಯಕ ಮತ್ತು ಸಂಗೀತ ಸಂಯೋಜಕ ಪಾಪೋನ್‌ ಹೇಳಿದ್ದಾರೆ.

ಮಕ್ಕಳ ರಿಯಾಲಿಟಿ ಶೋವೊಂದರಲ್ಲಿ ಜಡ್ಜ್‌ ಆಗಿದ್ದ ಪಾಪೋನ್‌, ಶೋನ ಸ್ಪರ್ಧಿಯಾಗಿದ್ದ ಅಪ್ರಾಪ್ತೆಯನ್ನು ಅನುಚಿತವಾಗಿ ಚುಂಬಿಸಿದ ಪ್ರಕರಣ ಸಂಬಂಧ ಕ್ಷಮೆ ಕೋರಿದ್ದಾರೆ. ಕ್ಯಾಮರಾದ ದೋಷದಿಂದಾಗಿ ಇಷ್ಟೆಲ್ಲ ಸಂಭವಿಸಿದೆ. ನಾನು ತಪ್ಪು ಮಾಡಿಲ್ಲದಿದ್ದರು ನನ್ನನ್ನು ಅಪರಾಧಿಯನ್ನಾಗಿ ನೋಡಲಾಗುತ್ತಿದ್ದು, ನನ್ನದು ತಪ್ಪು ಎಂದಾದರೆ ಅದಕ್ಕೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಸಹಜವಾಗಿಯೇ ಆ ಹೆಣ್ಣು ಮಗುವನ್ನು ಸ್ಪರ್ಶಿಸಿದ್ದೇನೆ. ಆದರೆ, ಇಂದಿನ ಪರಿಸರದಲ್ಲಿ ಸ್ಪರ್ಶಿಸುವುದೇ ತಪ್ಪು ಎನ್ನುವಂತಾಗಿದೆ. ಆ ಘಟನೆಗಾಗಿ ನಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಆ ಮಗುವಿನ ಮೆಂಟರ್‌ ಆಗಿದ್ದರಿಂದಾಗಿ ಮುಗ್ಧವಾಗಿ ನನ್ನ ಪ್ರೀತಿಯನ್ನು ಅಭಿವ್ಯಕ್ತಿಪಡಿಸಿದೆ. ಆದರೆ, ಇದು ಈ ರೀತಿಯಾಗುತ್ತದೆ ಎನ್ನುವ ಆಲೋಚನೆಯೇ ಇರಲಿಲ್ಲ. ಘಟನೆಯಲ್ಲಿರುವ ಚಿಕ್ಕ ಹುಡುಗಿಯ ಗುರುತನ್ನು ಮರೆಮಾಡಿಲ್ಲ. ನನಗೆ ಪ್ರೀತಿಯ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಪೂರ್ವಾಪರ ಯೋಚನೆಗಳಿಲ್ಲದ ಜನರಿಂದಾಗಿ ನಮ್ಮ ಎರಡು ಕುಟುಂಬಗಳ ನಾಶವಾಗುತ್ತಿವೆ ಎಂದು ಹೇಳಿದ್ದಾರೆ.

41 ವರ್ಷದ ಪಾಪೋನ್‌, ವಾಯ್ಸ್‌ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋನ ಮೆಂಟರ್‌ ಮತ್ತು ಜಡ್ಜ್‌ ಆಗಿದ್ದರು. ಫೆ. 20ರಂದು ಫೇಸ್‌ಬುಕ್‌ ಲೈವ್‌ಸ್ಟ್ರೀಮ್‌ಗೆ ಬಂದಿದ್ದ ಅವರು ಹೋಲಿ ಆಚರಣೆಯಲ್ಲಿ ತೊಡಗಿದ್ದ ವೇಳೆ 11 ವರ್ಷದ ಬಾಲಕಿಯ ಮುಖಕ್ಕೆ ಬಣ್ಣ ಹಚ್ಚಿ, ಆಕೆಯ ತುಟಿಗೆ ಚುಂಬಿಸಿದ್ದರು. ತಕ್ಷಣವೇ ವಿಡಿಯೋ ದೃಶ್ಯಾವಳಿಯನ್ನು ನೋಡಿ ಅದನ್ನು ಎಡಿಟ್‌ ಮಾಡುವಂತೆ ಸೂಚಿಸಿದ್ದರು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ನ ವಕೀಲೆ ರೂನಾ ಬುಯಾನ್‌ ಮಕ್ಕಳ ರಕ್ಷಣಾ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು.

Comments are closed.