
ಬೆಂಗಳೂರು: ಸದ್ಯ ಬಿಗ್ ಬಾಸ್ ವಿನ್ನರ್ ಆಗಿರುವ ಚಂದನ್ ಶೆಟ್ಟಿ ತಾನು ಗೀಡಿರುವ 50 ಲಕ್ಷ ಹಣವನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ಮೇಲೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಚಂದನ್ ಶೆಟ್ಟಿ, ಇದೀಗ ಅದೇ ಅಭಿಮಾನಿಗಳ ಕೃಪಾಕಟಾಕ್ಷದಿಂದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
106 ದಿನಗಳ ಕಾಲ ‘ಬಿಗ್ ಬಾಸ್’ ಮನೆಯೊಳಗೆ ಇರುವಲ್ಲಿ ಯಶಸ್ವಿ ಆದ ಚಂದನ್ ಶೆಟ್ಟಿಗೆ, ಗೆಲುವಿನ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ ಗೆದ್ದಿದ್ದು, ಆ ಹಣವನ್ನು ತಕ್ಷಣ ಆ ಸೂಟ್ ಕೇಸ್’ನ್ನು ತಮ್ಮ ತಂದೆಗೆ ನೀಡಿದರು.
”ನಮ್ಮ ಕುಟುಂಬಕ್ಕೆ ಈ ಭೂಮಿ ಮೇಲೆ ಸ್ವಂತ ಜಾಗ ಅಂತ ಇಲ್ಲ. ಇದ್ದ ಆಸ್ತಿಯನ್ನ ಅನಿವಾರ್ಯ ಕಾರಣಗಳಿಂದ ಮಾರಬೇಕಾಯಿತು. ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬರುವ ಹಣದಲ್ಲಿ ನನ್ನ ತಂದೆ ಆಸೆಯನ್ನ ಈಡೇರಿಸುತ್ತೇನೆ” ಎಂದು ವಾರಗಳ ಹಿಂದೆಯಷ್ಟೇ ‘ಬಿಗ್ ಬಾಸ್’ ಮನೆಯೊಳಗೆ ಚಂದನ್ ಶೆಟ್ಟಿ ಹೇಳಿಕೊಂಡಿದ್ದರು. ಆಡಿದ ಮಾತಿನಂತೆ, ‘ಬಿಗ್ ಬಾಸ್’ ಗೆದ್ದ ಮೇಲೆ ತಮ್ಮ ತಂದೆಗೆ ಬಹುಮಾನ ಹಣವನ್ನು ಚಂದನ್ ಶೆಟ್ಟಿ ನೀಡಿದರು.
Comments are closed.