ಮನೋರಂಜನೆ

ಬಿಗ್‌ ಬಾಸ್‌ ವಿನ್ನರ್ ಆದ ಈಕೆ ಯಾರು..? ಗೆದ್ದ ಹಣವೆಷ್ಟು ?

Pinterest LinkedIn Tumblr

ಮುಂಬೈ: ಹಲವಾರು ವಿವಾದಗಳು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ ಹಿಂದಿಯ ಬಿಗ್‌ ಬಾಸ್‌ 11ನೇ ಆವೃತ್ತಿಯಲ್ಲಿ ಶಿಲ್ಪಾ ಶಿಂದೆ ವಿಜೇತರಾಗಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಸಮಾರಂಭದಲ್ಲಿ ಶಿಲ್ಪಾ ಶಿಂದೆ ಮುಡಿಗೆ ಪ್ರಶಸ್ತಿ ದಕ್ಕಿತು.

ಭಾಬಿ ಜಿ ಘರ್‌ ಪರ್‌ ಹೈ ಧಾರಾವಾಹಿ ಖ್ಯಾತಿಯ ಶಿಲ್ಪಾ ಶಿಂದೆ ಬಿಗ್‌ ಬಾಸ್‌ ಟ್ರೋಫಿಯ ಜತೆಗೆ 44 ಲಕ್ಷ ರೂಪಾಯಿಗಳನ್ನು ಗೆದ್ದುಕೊಂಡಿದ್ದಾರೆ.

ಭಾನುವಾರ ಸುದೀರ್ಘ ಕಾಲ ನಡೆದ ಕಾರ್ಯಕ್ರಮದಲ್ಲಿ ನಿರೂಪಕ, ಬಾಲಿವುಡ್‌ ನಟ ಸಲ್ಮಾನ್ ಖಾನ್‌, ವಿಜೇತರನ್ನು ಘೋಷಿಸುತ್ತಿದ್ದಂತೆ ಶಿಲ್ಪಾ ಸಂತಸ ಮುಗಿಲು ಮುಟ್ಟಿತು.

ಇಡೀ ಬಿಗ್‌ ಬಾಸ್ 11ನೇ ಆವೃತ್ತಿ ಹಲವಾರು ವಿವಾದಗಳನ್ನು ಹುಟ್ಟುಹಾಕಿತು. ಅದರಲ್ಲೂ ಶಿಲ್ಪಾ ಹಾಗೂ ವಿಕಾಸ್ ಗುಪ್ತಾ ನಡುವಿನ ಜಗಳ ಸಾಕಷ್ಟು ವಿವಾದಕ್ಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಇದಲ್ಲದೇ ಇಡೀ ಬಿಗ್‌ ಬಾಸ್ ಮನೆಯಲ್ಲಿ ಶಿಲ್ಪಾ ಎಲ್ಲರಿಗೂ ‘ಮಾ’ ಆಗಿದ್ದರು.

ಬಿಗ್‌ಬಾಸ್ ಮನೆಯ ಅಡುಗೆ ಮನೆಯಲ್ಲಿ ಶಿಲ್ಪಾ ಎತ್ತಿದ ಕೈ. ಆದರೆ ಟಾಸ್ಕ್‌ಗಳಲ್ಲಿ ಸ್ಪಲ್ವ ಕಡಿಮೆ ಪ್ರದರ್ಶನ ನೀಡಿದ್ದರು. ಅಲ್ಲದೆ ಮನೆಯವರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಆದರೆ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಬಿಗ್‌ ಬಾಸ್‌ ಗೆದ್ದಿರುವ ಖುಷಿಯಲ್ಲಿ ಬೀಗುತ್ತಿರುವ ಶಿಲ್ಪಾ ಶಿಂದೆ ತಮ್ಮ ಅಭಿಮಾನಿಗಳು ಹಾಗೂ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದರೆ.

Comments are closed.