ಮನೋರಂಜನೆ

ಪ್ರತೀಕಾರದ ಲುಕ್‌ನಲ್ಲಿ ಅನುಷ್ಕಾ ಶರ್ಮಾ; ‘ಪರಿ’ ಟೀಸರ್ ಬಿಡುಗಡೆ

Pinterest LinkedIn Tumblr

ಮುಂಬೈ: ವಿವಾಹ ಸಂಭ್ರಮಾಚರಣೆ ಮುಗಿದ ಬಳಿಕ ಮತ್ತೆ ವೃತ್ತಿಜೀವನಕ್ಕೆ ಮರಳಿದ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ ‘ಪರಿ’ಯ ಟೀಸರ್ ನ್ನು ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ.

ತಮ್ಮದೇ ನಿರ್ಮಾಣದ ‘ಪರಿ’ಯ ಟೀಸರ್ ನಲ್ಲಿ ಅನುಷ್ಕಾ ಶೋಷಿತ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ಕಾದು ನಿಂತಂತೆ ಕಾಣಿಸುವ ವೀಡಿಯೋ ಇದೆ. ಕ್ಲೀನ್​ ಸ್ಲೇಟ್​ ಫಿಲ್ಮ್ಸ್​ ಹಾಗೂ ಕ್ರಿಆರ್ಜ್​ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗ್ಗಿರುವ ಈ ಚಿತ್ರ ಇದೇ ಮಾರ್ಚ್​ 2 ರಂದು ಬಿಡುಗಡೆಯಾಗಲಿದೆ

ಅನುಷ್ಕಾ ಅವರು ಟೀಸರ್ ನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವದರೊಡನೆ ‘ಪರಿಯ ಜತೆ ಈ ಬಾರಿ ಹೋಲಿ ಆಚರಣೆ’ ಎಂದೂ ಬರೆದುಕೊಂಡಿದ್ದಾರೆ.

ಪರಿ ಚತ್ರವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶನ ಮಾಡಿದ್ದು ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ರಬ್‌ ನೆ ಬನಾದಿ ಜೋಡಿ’, ‘ಕಹಾನಿ’ಯಂತಹಾ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅನುಷ್ಕಾ ಅವರ ‘ಪರಿ’ ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ‘ಪರಿ’ಯಲ್ಲಿ ಮುಖ್ಯಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಪರಮ್ರತಾ ಈ ಹಿಂದೆ ವಿದ್ಯಾ ಬಾಲನ್ ಜತೆ ‘ಕಹಾನಿ’ ಸಿನಿಮಾದಲ್ಲಿ ಅಭಿನಯಿಸಿದ್ದರು. ‘ಪರಿ’ ಸಿನಿಮಾವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶಿಸಿದ್ದು, ಚಿತ್ರೀಕರಣ ಮುಂಬೈ, ಕೋಲ್ಕತ್ತಾದಲ್ಲಿ ನಡೆದಿದೆ.

ಅನುಷ್ಕಾ ಅವರ ‘ಕ್ಲೀನ್ ಸ್ಲೇಟ್ ಫಿಲಂಸ್‌’ನಿಂದ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಪರಿ’. ಈ ಮೊದಲು ‘ಎನ್‌ಎಚ್ 10’ ಹಾಗೂ ‘ಫಿಲ್ಲೌರಿ’ ಸಿನಿಮಾಕ್ಕೆ ಅನುಷ್ಕಾ ನಿರ್ಮಾಪಕರಾಗಿದ್ದರು.

ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮಾರ್ಚ್‌ 2ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.

ಕಳೆದ ಡಿ.11ರಂದು ಅನುಷ್ಕಾ ಶರ್ಮಾ, ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯೊಂದಿಗೆ ವಿವಾಹವಾಗಿದ್ದರು.

Comments are closed.