ಮನೋರಂಜನೆ

ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿರುವ ದೀಪಿಕಾ ಪಡುಕೋಣೆ-ರಣ್‍ವೀರ್

Pinterest LinkedIn Tumblr

ಮುಂಬೈ: ಬಾಲಿವುಡ್ ಪದ್ಮಾವತಿ ಖ್ಯಾತಿಯ ಕನ್ನಡತಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್‍ವೊಂದು ಬಾಲಿವುಡ್‍ನಲ್ಲಿ ತುಂಬಾ ಹರಿದಾಡುತ್ತಿದೆ.

ದೀಪಿಕಾ ಪಡುಕೋಣೆ ತನ್ನ ಬಹುದಿನ ಬಾಯ್ ಫ್ರೆಂಡ್ ರಣ್‍ವೀರ್ ಸಿಂಗ್ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಶ್ರೀಲಂಕಾದಲ್ಲಿ ರಣವೀರ್ ಸಿಂಗ್ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ದೀಪಿಕಾ ಶೀಘ್ರವೇ ಅಲ್ಲೇ ಎಂಗೇಜ್ ಆಗಲಿದ್ದಾರಂತೆ.

ದೀಪಿಕಾ ಇದೇ ಜನವರಿ 5ರಂದು ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ದೀಪಿಕಾ ಹುಟ್ಟುಹಬ್ಬದಂದೇ ನಟ ರಣವೀರ್ ಸಿಂಗ್ ಕೈಗೆ ಉಂಗುರ ತೊಡಿಸಲಿದ್ದು, ಹುಟ್ಟುಹಬ್ಬವನ್ನೂ ಶ್ರೀಲಂಕಾದಲ್ಲಿಯೇ ಆಚರಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಯೇ ಇಬ್ಬರು ಎಂಗೇಜ್ ಆಗಲಿದ್ದಾರೆಂದು ಮೂಲಗಳು ಹೇಳುತ್ತೀವೆ.

ರಣವೀರ್ ಹಾಗೂ ದೀಪಿಕಾ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಈಗಾಗಲೇ ರಣವೀರ್ ದೀಪಿಕಾ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿಯೇ ಜೋಡಿ ಹೊಸ ವರ್ಷವನ್ನು ಸ್ವಾಗತಿಸಬೇಕಿತ್ತು. ಆದರೆ ಪ್ಲಾನ್ ಬದಲಾಯಿಸಿ ಶ್ರೀಲಂಕಾಕ್ಕೆ ಹೋಗಿದ್ದಾರೆ.

ಎಂಗೇಜ್‍ಮೆಂಟ್ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ತಾವಿಬ್ಬರು ಪ್ರೀತಿಸುತ್ತಿದ್ದೇವೆಂದು ಇನ್ನೂ ಜೋಡಿ ಬಹಿರಂಗವಾಗಿ ಹೇಳಿಲ್ಲ. ಆದರೆ ಅವರ ನಡೆ-ನುಡಿ ಇಬ್ಬರ ನಡುವೆ ಏನೇನೋ ಇದೆ ಎಂಬುದನ್ನು ಸಾರಿ ಹೇಳುತ್ತಿದೆ. ನಾವಿಬ್ಬರು ಒಟ್ಟಿಗಿದರೆ ನಮಗೆ ಮತ್ತೇನೂ ಕಾಣುವುದಿಲ್ಲವೆಂದು ಈ ಹಿಂದೆ ದೀಪಿಕಾ ಹೇಳಿದ್ದರು. ಏನೇ ಇರಲಿ ಶೀಘ್ರವೇ ಇಬ್ಬರು ಮದುವೆ ಸುದ್ದಿ ಕೊಡಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Comments are closed.