ಕರಾವಳಿ

ಕಲ್ಲಡ್ಕ ಕೊಲೆ ಆರೋಪಿಯ ಕೊಲೆ ಯತ್ನ ಪ್ರಕರಣ : ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಬಿಡುಗಡೆ

Pinterest LinkedIn Tumblr

ವೀರಕಂಭದ ಕೇಶವ

ಬಂಟ್ವಾಳ, ಡಿಸೆಂಬರ್. 28: ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿ ವೀರಕಂಭದ ಕೇಶವ ಎಂಬವರ ಮೇಲೆ ಹೆಲ್ಮೇಟ್ ಧಾರಿ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಯದ್ವತದ್ವ ಕಡಿದು ಪರಾರಿಯಾಗಿತ್ತು.

ಕೇಶವನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆ ಪೊಲೀಸರು ಕಲ್ಲಡ್ಕ ನಿವಾಸಿ ಖಲೀಲ್ ಎಂಬವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಖಲೀಲ್‌ನ ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು ನಂತರ ಬಿಡುಗಡೆಗೊಳಿಸಿದ್ದಾರೆ.
ಘಟನೆಯ ವೇಳೆ ಖಲೀಲ್ ಕಲ್ಲಡ್ಕದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಖಲೀಲ್ ಪಾತ್ರವಿಲ್ಲದ ಹಿನ್ನೆಲೆಯಲ್ಲಿ ಕೆಲವು ನಿಬಂಧನೆಯ ಮೇರೆಗೆ ಬಿಡುಗಡೆಗೊಳಿಸಲಾಗಿದೆ ಎನ್ನಲಾಗಿದೆ.

ಖಲೀಲ್ ಕಲ್ಲಡ್ಕದಲ್ಲಿ ಇರಲಿಲ್ಲ :ಎಸ್ ಪಿ ಸ್ಪಷ್ಟನೆ 

ಪ್ರಕರಣಕ್ಕೆ ಸಂಬಂಧಿಸಿ ಖಲೀಲ್‌ನನ್ನು ಬಂಧಿಸಲಾಗಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ ಜಿಲ್ಲಾ ಎಸ್ ಪಿ ಸುಧೀರ್ ರೆಡ್ಡಿ ಖಲೀಲ್‌ನನ್ನು ತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಘಟನೆಯ ವೇಳೆ ಖಲೀಲ್ ಕಲ್ಲಡ್ಕದಲ್ಲಿ ಇರಲಿಲ್ಲ ಮತ್ತು ಘಟನೆಯಲ್ಲಿ ಆತನ ಪಾತ್ರ ಇರುವುದು ಬೆಳಕಿಗೆ ಬಂದಿಲ್ಲ. ಹೀಗಾಗಿ ಆತನನ್ನು ಬಿಡುಗಡೆ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.