ಮನೋರಂಜನೆ

ಅಫ್ರಿದಿ ಬಿಲ್ ತೆತ್ತ ಅಭಿಮಾನಿ ದೇವರು!

Pinterest LinkedIn Tumblr

afridiಕರಾಚಿ: ನ್ಯೂಜಿಲೆಂಡ್‍ನ ಆಕ್ಲೆಂಡ್ ನಲ್ಲಿನ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಒಂದರಲ್ಲಿ ತಾವು ತಿಂದ ತಿಂಡಿಯ ಬಿಲ್ ಪಾವತಿಸಲು ಅಲ್ಲಿನ ಕರೆನ್ಸಿ ಕೊಂಡೊಯ್ಯದೇ ಫಜೀತಿಗೆ ಒಳಗಾದ ಪ್ರಸಂಗ ನಡೆದಿದೆ.

ನ್ಯೂಜಿಲೆಂಡ್ ವಿರುದ್ಧ 15ರಿಂದ ಶುರುವಾಗಲಿರುವ ಟಿ20 ಪಂದ್ಯ ಸರಣಿಗಾಗಿ ಆಗಮಿಸಿ ರುವ ಪಾಕ್ ತಂಡದ ನಾಯಕ ಅಫ್ರಿದಿ, ಸಹ ಆಟಗಾರ ಅಹ್ಮದ್ ಶಹಜಾದ್ ಜತೆ ಮೆಕ್ ಡೊನಾಲ್ಡ್‍ಗೆ ತಿಂಡಿ ತಿನ್ನಲು ಹೋಗಿದ್ದಾರೆ.

ಆದರೆ, ಅವರು ಸ್ಥಳೀಯ ಕರೆನ್ಸಿ ಕೊಂಡೊಯ್ಯದೇ ಯುಎಸ್ ಡಾಲರ್ ಕೊಂಡೊಯ್ದಿದ್ದು ಸಮಸ್ಯೆಯಾಯಿತು. ಅದೇ ವೇಳೆ, ಅದೇ ಹೋಟೆಲ್‍ಗೆ ಬಂದಿದ್ದ ಅಫ್ರಿದಿ ಅಭಿಮಾನಿ ವಕಾಸ್ ನವೀದ್ ಎಂಬಾತ ಬಿಲ್ ಪಾವತಿಸಿ, ಅಫ್ರಿದಿಯವರನ್ನು ಮುಜುಗರದಿಂದ ಪಾರು ಮಾಡಿದ ರು. ಅಭಿಮಾನಿ ದೇವರ ಆಪತ್ಕಾಲದ ನೆರವಿಗೆ ಅಫ್ರಿದಿ ಬೌಲ್ಡ್ ಆದರಂತೆ!

Write A Comment