ಮನೋರಂಜನೆ

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಅಶ್ವಿ‌ನ್‌ ನಂ.1 ಬೌಲರ್‌

Pinterest LinkedIn Tumblr

Ashwin

ನವದೆಹಲಿ: ಟೀಂ ಇಂಡಿಯಾ ದಿಗ್ವಿಜಯದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ನಂಬರ್ 1 ಸ್ಥಾನ ಪಡೆಯುವ ಮೂಲಕ 2015ಕ್ಕೆ ಅತ್ಯಂತ ಸಂಭ್ರಮದ ಸಾಧನೆಯೊಂದಿಗೆ ವಿದಾಯ ಹೇಳಿದ್ದಾರೆ. ಅಲ್ಲದೆ ಕಳೆದ 42 ವರ್ಷಗಳಲ್ಲೇ ಈ ಮಹತ್ತರ ಸಾಧನೆ ಮಾಡಿರುವ ಪ್ರಥಮ ಭಾರತೀಯ ಎನಿಸಿಕೊಂಡಿದ್ದಾರೆ.

2015ರಲ್ಲಿ ನಡೆದ ಒಂಬತ್ತು ಟೆಸ್ಟ್‌ ಪಂದ್ಯಗಳಲ್ಲಿ 62 ವಿಕೆಟ್‌ ಪಡೆದಿರುವ ಆರ್ ಅಶ್ವಿನ್‌ ಬೌಲಿಂಗ್‌ ವಿಭಾಗದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಟೆಸ್ಟ್‌ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಆಲ್‌ರೌಂಡರ್‌ ವಿಭಾಗದಲ್ಲೂ ಅಶ್ವಿನ್‌ ಮೊದಲ ಸ್ಥಾನದಲ್ಲಿದ್ದಾರೆ.

1973ರಲ್ಲಿ ಭಾರತದ ವಿಶ್ವ ವಿಖ್ಯಾತ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ ಅವರು ಐಸಿಸಿ ಅಗ್ರ ಟೆಸ್ಟ್‌ ಶ್ರೇಯಾಂಕ ಪಡೆದ ಸಾಧನೆ ಮಾಡಿದ್ದರು. ಇದೀಗ 42 ವರ್ಷಗಳ ಬಳಿಕ ಅಶ್ವಿ‌ನ್‌ ಅವರು ಈ ಸಾಧನೆಯನ್ನು ಮಾಡಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಭಾರತದ ಆಲ್‌ ರೌಂಡರ್‌ ರವೀಂದ್ರ ಜಡೇಜ ಅವರು ಆಲ್‌ ರೌಂಡರ್‌ಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ. ಇನ್ನೂ ವಿಶೇಷವೆಂದರೆ ಅಶ್ವಿ‌ನ್‌ ಮತ್ತು ಜಡೇಜ ಅವರು ಐಸಿಸಿ ಟೆಸ್ಟ್‌ ಬೌಲರ್‌ಗಳ ಹತ್ತು ಶ್ರೇಯಾಂಕಗಳಲ್ಲಿ ಕಾಣಿಸಿಕೊಂಡಿರುವ ಇಬ್ಬರು ಭಾರತೀಯರಾಗಿದ್ದಾರೆ.

Write A Comment