ಮನೋರಂಜನೆ

ಮಿಸೆಸ್‌ ರಾಮಾಚಾರಿ ಜೊತೆ ಚಿಟ್‌ಚಾಟ್‌; ರಾಧಿಕಾ ಮದುವೆ ಯಾವಾಗ?

Pinterest LinkedIn Tumblr

RADHIKA-pandit-02-10-2013ರಾಧಿಕಾ ಪಂಡಿತ್‌ “ಮಿಸ್ಟರ್‌ ಆ್ಯಂಡ್‌ ಮಿಸ್ಸೆಸ್‌ ರಾಮಚಾರಿ’ ಸಿನಿಮಾ ಯಶಸ್ಸಿನ ನಂತರ ರಾಧಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಮಾಧ್ಯಮಗಳಿಂದಲೂ ಅಂತರ ಕಾಪಾಡಿಕೊಂಡಿದ್ದಾರೆ. ಅದರ ನಡುವೆ ಅವರ ಮದುವೆಯ ವಿಷಯವೂ ಆಗಾಗ ಸುದ್ದಿಯಾಗುತ್ತಲೇ ಇದೆ.  ಒಪ್ಕೊಂಡಿರೋ ಸಿನಿಮಾಗಳ ಸಂಖ್ಯೆಯೂ ಕಡಿಮೆಯಾದಂತಿದೆ. ಹಾಗಾದ್ರೆ ರಾಧಿಕಾ ಮದುವೆಯಾಗ್ತಿದ್ದಾರಾ? ಅದಕ್ಕೋಸ್ಕರ ಕಡಿಮೆ ಚಿತ್ರಗಳನ್ನ ಒಪ್ಕೊಳ್ತಿದ್ದಾರಾ? ಅಂತೆಲ್ಲ ಅವರ ಅಭಿಮಾನಿಗಳು ಮಾತಾಡಿಕೊಳ್ತಿರೋ ಹೊತ್ತಿಗೇ ರಾಧಿಕಾ ಉದಯವಾಣಿಯ ಜೊತೆಗೆ ಮಾತನಾಡಿದ್ರು. ಸಿನಿಮಾ, ಮದುವೆ ಮೊದಲಾದ ವಿಷಯಗಳ ಬಗ್ಗೆ ಮಾತಾಡಿದ್ರು.

ರಾಧಿಕಾ ಮದುವೆ ಯಾವಾಗ?
ಒಬ್ಬ ನಟಿಯ ಬಗ್ಗೆ ಜನಕ್ಕೆ ಈ ರೀತಿಯ ಕುತೂಹಲ ಸಹಜ. ನನಗದು ಖಂಡಿತಾ ಗೊತ್ತು. ನಟಿ ಅಂತಲ್ಲ, ಯಾವ ವ್ಯಕ್ತಿಯ ಬದುಕಲ್ಲೂ ಮದುವೆ ಅನ್ನೋದು ಬಹಳ ಮಹತ್ವದ್ದು. ನನಗೂ ನನ್ನ ಮದುವೆಯ ಬಗ್ಗೆ ಒಂದಿಷ್ಟು ಕಲ್ಪನೆಗಳಿವೆ. ಅದು ಬದುಕಿನುದ್ದಕ್ಕೂ ಉಳಿಯುವ ಅವಿಸ್ಮರಣೀಯ ಘಳಿಗೆ. ಅಭಿಮಾನಿಗಳಿಗೆ ಗೊತ್ತಾಗದ ಹಾಗಂತೂ ಮದುವೆ ಆಗಲ್ಲ.

ಎಲ್ಲಿ ಇತ್ತೀಚೆಗೆಲ್ಲೂ ಕಾಣಿಸಿಕೊಳ್ತಾನೇ ಇಲ್ವಲ್ಲ?
ಹೊರಗೆಲ್ಲಾದ್ರೂ ಕಾಣಿಸಿಕೊಳ್ಳಬೇಕು ಅಂದ್ರೆ ಒಂದು ಉದ್ದೇಶ ಇರ್ಬೇಕು, ಸಂದರ್ಭ ಬರ್ಬೇಕು. ಅಂಥದ್ದೊಂದು ಸನ್ನಿವೇಶವೇ ಬರಲಿಲ್ಲ. ಅಂದ್ರೆ ಮಾಧ್ಯಮದ ಮುಂದೆ ಬಂದರೂ ಯಾವ ವಿಷ್ಯದ ಬಗ್ಗೆ ಮಾತಾಡೋದು?”ದೊಡ್ಮನೆ ಹುಡುಗ’ ಮತ್ತು “ಝೂಮ್‌’ ಸಿನಿಮಾಗಳು ಶೂಟಿಂಗ್‌, ರೀರೆಕಾರ್ಡಿಂಗ್‌ ಹಂತದಲ್ಲಿವೆ. ಅವು ಮುಗಿದ ಮೇಲೆ ಬೇಕಾದರೆ ಮಾತಾಡಬಹುದು. ಈಗ್ಲೆà ಅವುಗಳ ಬಗ್ಗೆ ಮಾತಾಡೋದು ಕಷ್ಟ. ಸಿನಿಮಾ ರಿಲೀಸ್‌ ಹೊತ್ತಿಗೆ ಖಂಡಿತಾ ಮಾತಾಡ್ತೀನಿ.

ಸಿನಿಮಾ ಒಪ್ಕೊಳ್ಳೋದು ಕಡಿಮೆ ಆಗ್ತಿದೆಯಾ?
ಈಗ ಅಂತಲ್ಲ, “ಮೊಗ್ಗಿನ ಮನಸ್ಸು’ ಸಮಯದಿಂದಲೂ ವರ್ಷಕ್ಕೆ ಒಂದೆರಡು ಸಿನಿಮಾ ಮಾತ್ರ ಒಪ್ಕೊಳ್ತಾ ಬಂದಿದ್ದೇನೆ. ಹಾಗಿದ್ದರೆ ಮಾತ್ರ ಆ ಸಿನಿಮಾಕ್ಕೆ ನ್ಯಾಯ ಕೊಡಲಿಕ್ಕಾಗೋದು. ಒಪ್ಕೊಂಡ ಅಷ್ಟೂ ಸಿನಿಮಾಗಳಲ್ಲಿ ನಾನು ಪೂರ್ತಿ ಇನ್‌ವಾಲ್‌ ಆಗ್ತಿನಿ. ಆರಂಭದಿಂದ ಚಿತ್ರ
ಬಿಡುಗಡೆಯಾಗುವವರೆಗೂ ಅದರ ಪ್ರತಿಹಂತದಲ್ಲೂ ನನ್ನನ್ನ ತೊಡಗಿಸಿಕೊಳ್ತೀನಿ. ಪ್ರತಿ ಚಿತ್ರಕ್ಕೂ 100 ಪರ್ಸೆಂಟ್‌ ಕೊಡ್ಬೇಕು ಅನ್ನೋದು ಮೊದಲಿಂದಲೂ ಮಾಡ್ಕೊಂಡು ಬಂದಿರೋ ನಿಯಮ. ಲಾಭದ ಗುರಿ ನನಗಿಲ್ಲ. ಮಾಡಿರೋ 10 ಸಿನಿಮಾದಲ್ಲಿ 7 ಸಿನಿಮಾವನ್ನ ಜನ ಒಪ್ಕೊಂಡು ರಾಧಿಕಾ ಪಂಡಿತ್‌ ಸಿನಿಮಾ ಅಂದ್ರೆ ಚೆನ್ನಾಗಿರತ್ತೆ ಅಂದ್ರೆ, ಅದರಷ್ಟು ಖುಷಿ ಇನ್ನೊಂದಿಲ್ಲ. ಚಿತ್ರರಂಗಕ್ಕೆ ಬಂದು ಏಳು ವರ್ಷ ಆಯ್ತು. ನಾನು ಮಾಡಿದ್ದು ಕೇವಲ 19 ಸಿನಿಮಾ ಅಷ್ಟೇ.

ಅಷ್ಟು ವರ್ಷಗಳಿಂದ ಇಂಡಸ್ಟ್ರಿಯ ಲ್ಲಿದ್ದವರು. ನಂ.1 ಪಟ್ಟವನ್ನ ಇವತ್ತಿನವರೆಗೂ ಉಳಿಸಿಕೊಂಡು ಬಂದಿದ್ದರ ಹಿಂದಿನ ಮರ್ಮವೇನು?
ನಾನ್ಯಾವತ್ತೂ ನನ್ನನ್ನ ನಂ.1 ಹೀರೋಯಿನ್‌ ಅಂತ ಎಲ್ಲೂ ಹೇಳ್ಕೊಂಡಿಲ್ಲ. ನಂ.1 ಪಟ್ಟದ ಬಗ್ಗೆ ತಲೆಕೆಡಿಸಿಕೊಳ್ಳಲಿಕ್ಕೂ ಹೋಗುವುದಿಲ್ಲ. ಹಾಗೆ ಮಾಡಿದ್ರೆ ಅದರಿಂದ ನಮ್ಮ ಗುರಿಗೆ ಅಡ್ಡಿಯಾಗತ್ತೆ. ನಂ.1 ಪಟ್ಟವನ್ನ ಹಾಗೇ ಉಳಿಸ್ಕೋಬೇಕು ಅನ್ನೋ ದುರಾಸೆ ಬರಬಹುದು.
ಅದಕ್ಕೋಸ್ಕರನೇ ಜಾಸ್ತಿ ಜಾಸ್ತಿ ಸಿನಿಮಾಗಳನ್ನ ಒಪ್ಕೋಬೇಕಾ ಗಬಹುದು. ಸುಳ್ಳು ಕಲ್ಪನೆಗೆ ಬಲಿಯಾಗ ಬಹುದು. ವಿಭಿನ್ನವಾದ ಸಿನಿಮಾಗಳಲ್ಲಿ ಮಾಡ್ಬೇಕು, ನನಗಿಷ್ಟವಾಗುವ ಪಾತ್ರಮಾಡಬೇಕು, ನನ್ನ ನಂಬಿ ಬಂದ ಜನಕ್ಕೆ ಯಾವತ್ತೂ ನಿರಾಶೆ ಆಗ್ಬಾರ್ದು ಮೊದಲಾದ ಗುರಿಗಳಿವೆ ನನಗೆ. ನನಗೆ ನಂ.1 ಅಂತ ಗುರುತಿಸಿಕೊ ಳ್ಳೋದಕ್ಕಿಂತಲೂ ರಾಧಿಕಾ ಪಂಡಿತ್‌ ಅಂದ್ರೆ ಒಳ್ಳೆಯ ನಟಿ, ಒಳ್ಳೆಯ ಹುಡುಗಿ ಅಂತ ಕರೆಸಿಕೊಳ್ಳೋಕೆ ಇಷ್ಟ. ನಂ.1 ನಟಿಯಾಗಿ ಹತ್ತು ವರ್ಷಗಳ ಬಳಿಕವೂ ನಾನು ಜನರ ಮನಸ್ಸಲ್ಲಿ ಉಳಿಯಬಲ್ಲೆ ಅನ್ನಲಿಕ್ಕಾಗುವುದಿಲ್ಲ. ಆದರೆ, ಒಳ್ಳೆಯ ನಟಿಯಾಗಿ ಗುರುತಿಸಿಕೊಂಡರೆ ಬಹಳ ಕಾಲ ಜನರ ಮನಸ್ಸಿನಲ್ಲಿ ಉಳಿಯಬಹುದು. ಹಾಗಂತ ಮಾಧ್ಯಮಗಳು ನನ್ನ ನಂ.1 ನಟಿ ಅಂತ
ಗುರುತಿಸಿರೋದಕ್ಕೆ ಖಂಡಿತಾ ಕೃತಜ್ಞತೆ ಇದೆ, ಖುಷಿ ಇದೆ.
-ಉದಯವಾಣಿ

Write A Comment