ಸಲ್ಮಾನ್ ಖಾನ್ – ಕ್ಯಾಟ್ ಮತ್ತೆ ಒಂದಾಗಲಿದ್ದಾರಂತೆ. ನಿಜ ಜೀವನದಲ್ಲಿ ಅಂದುಕೊಂಡಿರಾ? ಇಲ್ಲ ತಮ್ಮ ಮಾಜಿ ಪ್ರೇಮಿ ಕತ್ರಿನಾ ಕೈಫ್ ಜತೆಯಾಗಿ ಸಲ್ಮಾನ್ ಖಾನ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಹೀಗೆಂದು ಬಿ ಟೌನ್‌ನಲ್ಲಿ ಸುದ್ದಿ ಹರದಾಡುತ್ತಿದ್ದು, ಇದು ಬಹುತೇಕ ಖಚಿತವೂ ಆಗಿದೆ.
ಏಕ್ತಾ ಟೈಗರ್ ಚಿತ್ರದ ಮೂಲಕ ಮೋಡಿ ಮಾಡಿದ್ದ ಕ್ಯಾಟ್- ಸಲ್ಲು ಜೋಡಿ ಸಲ್ಮಾನ್ ಭಾವ ಅತುಲ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ನಾನು ಅತುಲ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ, ಎಂದಿದ್ದಾರೆ.
ಈ ಚಿತ್ರದಲ್ಲಿ ಕತ್ರಿನಾಗೆ ಸಹ ಮುಖ್ಯ ಪಾತ್ರವಿದೆಯಾ ಎಂದು ಕೇಳಲಾಗಿ, “ಅವರು ಈ ಚಿತ್ರದಲ್ಲಿ ನಟಿಸಬೇಕೆಂಬುದು ನನ್ನ ಬಯಕೆ. ಆದರೆ ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ”, ಎಂದು ಸಲ್ಲು ತಮ್ಮ ಮನದಿಂಗಿತವನ್ನು ಹೇಳಿಕೊಂಡಿದ್ದಾರೆ.
ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸಲ್ಲು ಮತ್ತು ಕ್ಯಾಟ್ ಜೋಡಿ ಅಭಿಮಾನಿಗಳ ಬಹುದಿನಗಳ ನಿರೀಕ್ಷೆ ಈಡೇರಲಿದೆ.