ಮನೋರಂಜನೆ

ಮಿಲಿಟರಿ ಟ್ರೈನಿಂಗ್‍ಗೆ ಸಜ್ಜಾಗುತ್ತಿರುವ ಧೋನಿ ನೇತೃತ್ವದ ಟೀಂ ಇಂಡಿಯಾ !

Pinterest LinkedIn Tumblr

dhoni

ಧರ್ಮಶಾಲಾ: ದ್ರಾವಿಡ್ ಹುಡುಗರು ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದರೆ, ಅತ್ತ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಮಿಲಿಟರಿ ಟ್ರೈನಿಂಗ್‍ಗೆ ಸಜ್ಜಾಗುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಧೋನಿ ಅಂಡ್ ಟೀಂ ಎರಡು ದಿನಗಳ ಬೂಟ್ ಕ್ಯಾಂಪ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಅಕ್ಟೋಬರ್ 2 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸುದೀರ್ಘ ಸರಣಿಗೆ ಚಾಲನೆ ಸಿಗಲಿದೆ. ಇದಕ್ಕಾಗಿ ಅಗತ್ಯವಾದ ದೈಹಿಕ ಸಾಮಥ್ರ್ಯ ಪರೀಕ್ಷೆ, ತರಬೇತಿ ಪಡೆಯಲು ಬೂಟ್ ಕ್ಯಾಂಪ್ ಅಗತ್ಯವಿದೆ ಎಂದು ನಾಯಕ ಧೋನಿ ಹಾಗೂ ನಿರ್ದೇಶಕ ರವಿಶಾಸ್ತ್ರಿ ನಿರ್ಧರಿಸಿದ್ದಾರೆ. ಇದಕ್ಕೆ ಬಿಸಿಸಿಐ ಸಮ್ಮತಿ ನೀಡಿದ್ದು ಈಗಾಗಲೇ ಟೀಂ ಇಂಡಿಯಾ ಧರ್ಮಶಾಲಾದಲ್ಲಿ ಬೀಡುಬಿಟ್ಟಿದ್ದು ಭರ್ಜರಿ ಸಮರಾಭ್ಯಾಸ ನಡೆಸಲಿದ್ದಾರೆ. ಇನ್ನು ಇಲ್ಲಿ ನಡೆಯುವ ಮೊದಲ ಟಿ 20 ಪಂದ್ಯದ ಮೂಲಕ 2 ತಿಂಗಳುಗಳ ಕಾಲ 3 ಟಿ 20 ಪಂದ್ಯ, 5 ಏಕದಿನ, 4 ಟೆಸ್ಟ್ ಪಂದ್ಯಗಳಿಗೆ ಚಾಲನೆ ಸಿಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಈಗಾಗಲೇ ಟೀಂ ಇಂಡಿಯಾ ಅಭ್ಯಾಸ ನಡೆಸಿದೆ. ಸಮುದ್ರ ಮಟ್ಟದಿಂದ ಸುಮಾರು 7,000 ಅಡಿ ಎತ್ತರದಲ್ಲಿರುವ ಧರ್ಮಶಾಲಾದಲ್ಲಿ ಕ್ರಿಕೆಟ್ ಆಡಬೇಕಿರುವುದರಿಂದ ಈ ತರಬೇತಿ ಅಗತ್ಯವಾಗಿದೆ. ಇತ್ತೀಚೆಗೆ ಸೇನೆಯಲ್ಲಿ ತರಬೇತಿ ಪಡೆದಿರುವ ಧೋನಿಗೆ ಈ ತರಬೇತಿ ಹೊಸತಲ್ಲ. ಆದರೆ ಉಳಿದ ಆಟಗಾರರಿಗೆ ಈ ತರಬೇತಿ ಹೊಸತು.

Write A Comment