ಮನೋರಂಜನೆ

ಕರೀನಾ ಹವಾ: ಬೇಬೊ ಹುಟ್ಟು ಹಾಕಿದ ಟ್ರೆಂಡ್

Pinterest LinkedIn Tumblr

kareenaಪುಟ್ಟ ಬಾಲ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಕರೀನಾ ಕಪೂರ್ ಈಗ ಖಾನ್‌ದಾನ್‌ನ ಪ್ರತಿಭೆಯ ವಾರಸುದಾರಿಣಿ, ಸೈಫ್‌ನ ಮುದ್ದಿನ ಮನದನ್ನೆ.

ನಿನ್ನೆ ತಾನೆ ಬರ್ತ್‌ಡೇ ಆಚರಿಸಿಕೊಂಡ ಈಕೆ ಬಾಲಿವುಡ್‌ನಲ್ಲಿ ಹಲವಾರು ಟ್ರೆಂಡ್‌ಗಳನ್ನು ಹುಟ್ಟುಹಾಕಿದಾಕೆ ಎಂದು ಕೂಡ ಕೊಂಡಾಡಲ್ಪಟ್ಟಳು. ಹೀಗೆ ಆಕೆ ಪ್ರಮೋಟ್ ಮಾಡಿದ ಕೆಲವು ಗ್ಲಾಮರ್, ಪ್ಯಾಷನ್ ಟ್ರೆಂಡ್‌ಗಳನ್ನು ಇಲ್ಲಿ ನೋಡೋಣ ಬನ್ನಿ.

‘ಜಬ್ ವಿ ಮೆಟ್‌’ ಆಕೆಗೆ ದೊಡ್ಡ ಹೆಸರು ತಂದುಕೊಟ್ಟ ಸೂಪರ್‌ಹಿಟ್ ಚಿತ್ರ. ಇದರಲ್ಲಿ ಆಕೆ ಧರಿಸಿದ ಪಟಿಯಾಲ ಸಲ್ವಾರ್ ಈಗ ಕರೀನಾ ಪಟಿಯಾಲ ಅಂತಲೇ ಫೇಮಸ್ಸು. ದೊಗಲೆ ದೊಗಲೆಯಾಗಿ, ಕಾಂಟ್ರಾಸ್ಟ್ ಬಣ್ಣಗಳು ಮತ್ತು ಬಿಸಿ ಟಾಪ್‌ನಿಂದ ಮನ ಸೆಳೆಯುವ ಈ ಸಲ್ವಾರ್‌ಗಳನ್ನು ಈಕೆ ಜಬ್ ವಿ ಮೆಟ್‌ನ ಅನೇಕ್ ಸೀನ್‌ಗಳಲ್ಲಿ ಧರಿಸಿದ್ದಳು. ಫಿಲಂ ಹಿಟ್ ಆದದ್ದೇ ಈ ದಿರಿಸು ಯುವತಿಯರಲ್ಲಿ ತುಂಬಾ ಪಾಪ್ಯುಲರ್ ಆಗಿ ಬಿಟ್ಟಿತು.

ಬಾಲಿವುಡ್‌ನಲ್ಲಿ ಜೀರೋ ಟ್ರೆಂಡ್ ಅನ್ನು ಶುರು ಮಾಡಿದ್ದೇ ಕರೀನಾ ಕಪೂರ್ ಎನ್ನಬೇಕು. ‘ತಶಾನ್‌’ ಚಿತ್ರದಲ್ಲಿ ಈಕೆ ತುಂಬಾ ತೆಳ್ಳಗಾಗಿ, ಒಂದು ಕರ್ಚೀಫನ್ನು ಈಕೆಯ ಸೊಂಟಕ್ಕೆ ಸುತ್ತಬಹುದು ಎನ್ನುವಷ್ಟು ತೆಳ್ಳಗಾಗಿ ಕಾಣಿಸಿಕೊಂಡಿದ್ದಳು. ಈ ಸೈಝ್ ಮೇಂಟೇನ್ ಮಾಡಲು ಆಕೆ ಪಾಲಿಸಿದ ಡಯಟ್‌ನ ಹಾರರ್ ಕತೆಗಳೂ ಸಾಕಷ್ಟು ಹಬ್ಬಿದ್ದವು. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕೆಂಬ ಗೀಳಿನ ತರುಣಿಯರು ಇದರ ಹಿಂದೆ ಬಿದ್ದರು. ಅಫ್‌ಕೋರ್ಸ್, ಇಂದು ಕರೀನಾ ಸೈಝ್ ಜೀರೋ ದಾಟಿ ತುಂಬಾ ಮುಂದೆ ಹೋಗಿದೆ. ಈಗ ನಾವು ಕನಿಷ್ಠ ಮೈಕೈ ತುಂಬಿಕೊಂಡ ಕರೀನಾಳನ್ನು ನೋಡಬಹುದು.

ಬೇಡಿಕೆಯಿಲ್ಲದೆ ಐಟಂ ಸಾಂಗ್‌ಗಳಲ್ಲಿ ಕಾಣಿಕೊಳ್ಳುವವವರುಂಟು. ಆದರೆ ಎ ಗ್ರೇಡ್ ನಾಯಕಿಯಾಗಿ ಇಮೇಜ್‌ನ ಭಯವಿಲ್ಲದೆ ಬೇರೆ ಚಿತ್ರಗಳಲ್ಲಿ ಐಟಂ ನಂಬರ್ ಕುಣಿಯಲು ಶುರು ಮಾಡಿದಳು ಕರೀನಾ. ‘ಕ್ಯಾ ಲವ್ ಸ್ಟೋರಿ ಹೈ’ಯ ‘ಇಟ್ಸ್ ರಾಕಿಂಗ್‌’ನಿಂದ ದಬಾಂಗ್ 2 ನ ಫೆವಿಕಾಲ್ ಸೆ’ವರೆಗೆ ಈಕೆಯ ಹಲವಾರು ಐಟಂಗಳು ಜನಪ್ರಿಯವಾದವು. ಜನ ಫಿಲಂ ನೋಡಿದರೋ ಇಲ್ಲವೋ, ಹಾಡುಗಳಂತೂ ಹವಾ ಎಬ್ಬಿಸಿದವು. ಕತ್ರಿನಾ ಕೈಫ್‌ಳಂಥ ನಾಯಕಿಯರು ಈ ಟ್ರೆಂಡ್‌ನ್ನು ಲಬಕ್ಕನೆ ಕ್ಯಾಚ್ ಹಾಕ್ಕೊಂಡರು. ಇತ್ತೀಚೆಗೂ ‘ಬ್ರದರ್ಸ್‌’ನಲ್ಲಿ ಮೇರಾ ನಾಮ್ ಮೋರಿ ಅಂತ, ‘ಗಬ್ಬರ್ ಈಸ್ ಬ್ಯಾಕ್‌ನಲ್ಲಿ’ ತೇರಿ ಮೇರಿ ಕಹಾನಿ ಅಂತ ಆಕೆ ಕುಣಿದದ್ದುಂಟು.

ಕೆಂಚುಗೂದಲ ಚೆಲುವೆಯಾಗಿ ಈಕೆ ವೃತ್ತಿ ಜೀವನದ ಮೊದಲಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಳು. 36 ಚೈನಾ ಟೌನ್, ಐತರಾಜ್, ಹಲ್‌ಚಲ್, ಖುಷಿ ಮುಂದಾತ ಚಿತ್ರಗಳಲ್ಲಿ ಈಕೆ ಅವತಾರವನ್ನು ನಾವು ನೋಡಬಹುದು. ಇದೊಂದು ಮೇಜರ್ ಫ್ಯಾಷನ್ ಟ್ರೆಂಡ್ ಆಗಿ ಬೆಳೆಯುತ್ತಲೇ ಅದರಿಂದ ಹಿಂದೆ ಸರಿದಳು. ಆದರೆ ಇತರರು ಆಕೆಯನ್ನು ಅನುಸರಿಸಿದರು.

ಶಕ್ತಿಯೋಗವನ್ನು ಫಿಟ್‌ನೆಸ್ ಮಂತ್ರವಾಗಿ ಪ್ರಮೋಟ್ ಮಾಡಿದವಳು ಕರೀನಾ. ಈಕೆಗಿಂತಲೂ ಮೊದಲು ಇದನ್ನು ಪಾಲಿಸಿದವರಿಲ್ಲ ಎಂದೇನೂ ಇಲ್ಲ. ಆದರೆ ಗ್ಲಾಮರ್ ಜತೆಗೆ ಇದು ಸಹಜವಾಗಿ ಮಿಳಿತಗೊಂಡು ಬಂದದ್ದು ಬೇಬೊಳಿಂದ. ಶಿಲ್ಪಾ ಶೆಟ್ಟಿ ಮಲ್ಲಿಕಾ ಅರೋರಾಳಂಥ ಕೆಲವರು ಆಕೆಯನ್ನು ಅನುಸರಿಸಿದರು.

Write A Comment