ಮನೋರಂಜನೆ

ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಮಂಚಕ್ಕೆ ಕರೆದವರಿಗೀಗ ಭೀತಿ

Pinterest LinkedIn Tumblr

8642Sri-Lanka-Cricket

ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಬೇಕೆಂದರೆ ತಮ್ಮೊಂದಿಗೆ ಸಹಕರಿಸಬೇಕೆಂಬ ಬೇಡಿಕೆಯಿಟ್ಟಿದ್ದ ಶ್ರೀಲಂಕಾ ಮಹಿಳಾ ಕ್ರಿಕೆಟ್ ಆಯ್ಕೆ ಮಂಡಳಿ ಸದಸ್ಯರ ವಿರುದ್ದ ಹಿರಿಯ ಮಹಿಳಾ ಆಟಗಾರ್ತಿ ಮಾಡಿದ್ದ ಆರೋಪ ದೃಢಪಟ್ಟಿದ್ದು, ಸರ್ಕಾರ ಈಗ ಕ್ರಮಕ್ಕೆ ಮುಂದಾಗಿದೆ.

ಆಯ್ಕೆ ಮಂಡಳಿಯ ಬಹುತೇಕ ಸದಸ್ಯರು ಮಹಿಳಾ ಆಟಗಾರರಿಗೆ ತಮ್ಮ ಆಸೆ ಪೂರೈಸುವಂತೆ ಬೇಡಿಕೆ ಇರಿಸುತ್ತಿದ್ದರೆನ್ನಲಾಗಿದ್ದು, ಇದಕ್ಕೆ ಒಪ್ಪದ ಆಟಗಾರರನ್ನು ಪ್ರತಿಭಾವಂತರಾಗಿದ್ದರೂ ಸಹ ಆಯ್ಕೆ ಮಾಡದೆ ತಾರತಮ್ಯ ಮಾಡುತ್ತಿದ್ದರೆಂದು ಹೇಳಲಾಗಿದೆ.

ಆಯ್ಕೆ ಮಂಡಳಿ ಸದಸ್ಯರ ಬೇಡಿಕೆಗೆ ಒಪ್ಪದ ಹಿರಿಯ ಮಹಿಳಾ ಆಟಗಾರರೊಬ್ಬರನ್ನು ತಂಡದ ಆಯ್ಕೆ ವೇಳೆ ಕಡೆಗಣಿಸಿದ್ದು, ಇದರಿಂದ ಸಿಡಿದೆದ್ದ ಅವರು ಸಂಬಂಧಿಸಿದವರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆಗಾಗಿ ಸಮಿತಿ ನೇಮಿಸಲಾಗಿದ್ದು, ತನಿಖೆ ವೇಳೆ ಹಿರಿಯ ಮಹಿಳಾ ಆಟಗಾರ್ತಿ ಮಾಡಿದ್ದ ಆರೋಪ ದೃಢಪಟ್ಟಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.

Write A Comment