
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮನೆಯನ್ನು ತೆರವುಗೊಳಿಸಲು ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ!
ಇತ್ತೀಚೆಗಷ್ಟೇ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ಅವರ ಕಚೇರಿಯ ಕೆಲ ಭಾಗ ಅತಿಕ್ರಮಣವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿತ್ತು
ಹೌದು, ಇದೀಗ ಮುಂಬೈನ ಖರ್ ಪ್ರದೇಶದಲ್ಲಿರುವ ಕಂಗನಾ ಮನೆಗೂ ಬಿಎಂಸಿ ನೋಟಿಸ್ ರವಾನಿಸಿದ್ದು, ಅತಿಕ್ರಮಣವಾದ ಮನೆಯನ್ನು ತೆರೆವುಗೊಳಿಸಿ ಎಂದಿದೆ. ಖರ್ ಪ್ರದೇಶದ ಬಹು ಮಹಡಿಯ ಅಪಾರ್ಟ್ಮೆಂಟ್ನಲ್ಲಿ ಮೂರು ಫ್ಲಾಟ್ಗಳು ಕಂಗನಾ ಅವರದ್ದಾಗಿವೆ.
ಮೊದಲ ಫ್ಲಾಟ್ 797 ಚದರ ಅಡಿ ವಿಸ್ತಿರ್ಣ, ಎರಡನೆಯದ್ದು 711 ಚದರ ಅಡಿ ಮತ್ತು ಮೂರನೇಯ ಫ್ಲಾಟ್ 459 ಚದರ ಅಡಿ ವಿಸ್ತೀರ್ಣ ಹೊಂದಿದೆ. 2019ರ ಮಾರ್ಚ್ 8ರಂದು ಕಂಗನಾ ಹೆಸರಿನಲ್ಲಿ ಈ ಮೂರು ಕಟ್ಟಡಗಳು ನೋಂದಣಿಯಾಗಿವೆ. ಕಟ್ಟಡದ ಪ್ಲಾನ್ನಲ್ಲಿ ಇಲ್ಲದ ಒಂದಷ್ಟು ಭಾಗಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸುವಂತೆ ನೋಟಿಸ್ನಲ್ಲಿ ಆದೇಶಿಸಿದೆ.
Comments are closed.